Breaking News
Home / ರಾಜ್ಯ / ಅದೆಷ್ಟೋ ಜನರ ಜನ್ಮದಿನ ಯಾವಾಗ ಎಂದು ಸಾಮಾನ್ಯವಾಗಿ ತಿಳಿಯುವುದೇ ಫೇಸ್​ಬುಕ್​ನಿಂದ. ಅಂಥ ಫೇಸ್​ಬುಕ್​ ಎಂಬ ವೇದಿಕೆಯನ್ನು ಒದಗಿಸಿದ ಮಾರ್ಕ್​ ಝುಕರ್​ಬರ್ಗ್​ ಜನ್ಮದಿನಕ್ಕೆ ಫೇಸ್​ಬುಕ್​ ಬಳಕೆದಾರರು ಜನ್ಮದಿನದ ಶುಭಾಶಯ

ಅದೆಷ್ಟೋ ಜನರ ಜನ್ಮದಿನ ಯಾವಾಗ ಎಂದು ಸಾಮಾನ್ಯವಾಗಿ ತಿಳಿಯುವುದೇ ಫೇಸ್​ಬುಕ್​ನಿಂದ. ಅಂಥ ಫೇಸ್​ಬುಕ್​ ಎಂಬ ವೇದಿಕೆಯನ್ನು ಒದಗಿಸಿದ ಮಾರ್ಕ್​ ಝುಕರ್​ಬರ್ಗ್​ ಜನ್ಮದಿನಕ್ಕೆ ಫೇಸ್​ಬುಕ್​ ಬಳಕೆದಾರರು ಜನ್ಮದಿನದ ಶುಭಾಶಯ

Spread the love

ಬೆಂಗಳೂರು: ಅದೆಷ್ಟೋ ಜನರ ಜನ್ಮದಿನ ಯಾವಾಗ ಎಂದು ಸಾಮಾನ್ಯವಾಗಿ ತಿಳಿಯುವುದೇ ಫೇಸ್​ಬುಕ್​ನಿಂದ. ಅಂಥ ಫೇಸ್​ಬುಕ್​ ಎಂಬ ವೇದಿಕೆಯನ್ನು ಒದಗಿಸಿದ ಮಾರ್ಕ್​ ಝುಕರ್​ಬರ್ಗ್​ ಜನ್ಮದಿನಕ್ಕೆ ಫೇಸ್​ಬುಕ್​ ಬಳಕೆದಾರರು ಜನ್ಮದಿನದ ಶುಭಾಶಯಗಳನ್ನೇ ಹರಿಸಿದ್ದಾರೆ.

 

1984ರ ಮೇ 14ರಂದು ಜನಿಸಿದ ಮಾರ್ಕ್​ ಝುಕರ್​ಬರ್ಗ್​ ಫೇಸ್​ಬುಕ್​ ಆರಂಭಿಸಿದ್ದು, ಜಗತ್ತಿನಾದ್ಯಂತರ ಜನರಿಗೆ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಟ್ಟಿದ್ದಲ್ಲದೆ, ಜನರನ್ನು ಬೆಸೆಯುವ ಸಾಧನವನ್ನೂ ಆಗಿಸಿದ್ದಾರೆ. ಅಂಥ ಝುಕರ್​ಬರ್ಗ್​ಗೆ 17 ಲಕ್ಷಕ್ಕೂ ಅಧಿಕ ಮಂದಿ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

ಜನ್ಮದಿನಕ್ಕೆ ಹೇಳುವಂಥ ಸಾಮಾನ್ಯ ಹ್ಯಾಪಿ ಬರ್ತ್​ ಡೇ ಜತೆಗೆ ಹಲವು ಬಳಕೆದಾರರು ಚಿತ್ರವಿಚಿತ್ರ ರೀತಿಯಲ್ಲಿ ಶುಭಾಶಯಗಳನ್ನು ಕೋರಿರುವುದರಿಂದ ಬರ್ತ್​ಡೇ ಪೋಸ್ಟ್​ನ ಕಮೆಂಟ್​ ಸೆಕ್ಷನ್​ ಗಮನ ಸೆಳೆಯಲಾರಂಭಿಸಿದೆ.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ