ಕಲಬುರಗಿ: ಹಿಂದೂ ಸಂಘಟನೆಗಳ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾದಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಈ ಹಿಂದೆ ದೇವಗೌಡರು ಹಿಂದೂ ಕುಟುಂಬದಲ್ಲಿ ಹುಟ್ಟಿದ್ದೆ ತಪ್ಪು ಅಂದಿದ್ದರು. ಮುಂದಿನ ಜನ್ಮದಲ್ಲಿ ಮುಸ್ಲಿಂ ಕುಟುಂಬದಲ್ಲಿ ಹುಟ್ಟೋದಾಗಿ ಹೇಳಿದ್ದರು. ಇಡೀ ಕುಟುಂಬದಲ್ಲಿ ಹಿಂದೂ ವಿರೋಧಿ ರಕ್ತ ಹರಿಯುತ್ತಿದೆ. ಹೀಗೆ ಹಿಂದೂ ವಿರೋಧಿ ಟೀಕೆ ಮಾಡ್ತಿದ್ದರೆ ನಿಮಗೆ ನೆಲೆ ಸಿಗಲಾರದು. ದೇಶ, ರಾಜ್ಯದಲ್ಲಿ ಹಿಂದೂ ಸಂಘಟನೆಗಳು ಇದ್ದಿದ್ದರಿಂದಲೇ ನೀವು ಹಿಂದೂವಾಗಿ ಹುಟ್ಟಲು ಸಾಧ್ಯವಾಗಿದೆ. ಭಾರತ ಹಿಂದೂ ರಾಷ್ಟ್ರ, ಹಿಂದೂಗಳ ಜಾಗೃತಿಗಾಗಿ ಹಿಂದೂ ಸಂಘಟನೆಗಳು ಕೆಲಸ ಮಾಡುತ್ತಿವೆ. ಕುಮಾರಸ್ವಾಮಿ ಮುಸ್ಲಿಂ ತುಷ್ಟೀಕರಣ ನೀತಿ ಅನುಸರಿಸುತ್ತಿದ್ದಾರೆ. ಮುಸ್ಲಿಂ ಮತಗಳ ಕ್ರೋಡಿಕರಣಕ್ಕಾಗಿ ಅವರ ಓಲೈಕೆ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಅಶಾಂತಿ ಮೂಡಿಸಿದವರು ಹಿಂದೂ, ಹಿಂದೂ ಸಂಘಟನೆಗಳಲ್ಲಾ. ಮುಸ್ಲಿಂ ಮತ್ತು ಮುಸ್ಲಿಂ ಸಂಘಟನೆಗಳು ಅಶಾಂತಿ ಮೂಡಿಸಿವೆ. ನಿಮ್ಮದು ಜ್ಯಾತ್ಯಾತೀತ ಜನತಾದಳ ಪಕ್ಷ. ಆದ್ರೆ ಎಲ್ಲಿದೆ ನಿಮ್ಮ ಜ್ಯಾತ್ಯಾತೀತ ತತ್ವ ಎಂದು ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಸಿದ್ದಲಿಂಗ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ.