Breaking News

ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ..; ಪೊಲೀಸರಿಗೆ ಎಚ್ಚರಿಕೆ ಕೊಟ್ಟ ಡಿ.ಕೆ ಶಿವಕುಮಾರ್

Spread the love

ಬೆಂಗಳೂರು: ಯಾರಿಗೂ ಅಧಿಕಾರ ಶಾಶ್ವತವಲ್ಲ. ಎಲ್ಲರಿಗೂ ಇದು ನೆನಪಿರಲಿ. ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಸರ್ಕಾರ ಬದಲಾವಣೆಯಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.

 

ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೊಲೀಸರ ವಿರುದ್ಧ ಕಿಡಿಕಾರಿದರು.

ಪೊಲೀಸರು ಅವರ ಬಟ್ಟೆ ಬಿಚ್ಚಿ ಬಿಜೆಪಿ ಬಟ್ಟೆ ಹಾಕಿಕೊಳ್ಳಲಿ. ಯಾವ್ಯಾವ ಪೊಲೀಸ್ ಅಧಿಕಾರಿಗಳು ಏನೇನು ಮಾಡುತ್ತಿದ್ದಾರೆಂದು ನನಗೆ ಗೊತ್ತಿದೆ. ಎಲ್ಲ ಮಾಹಿತಿ ನನ್ನ ಬಳಿ ಇದೆ ಎಂದರು.

ಗೃಹ ಸಚಿವ ಒಬ್ಬ ನಾಲಾಯಕ್. ಶಿವಮೊಗ್ಗದಲ್ಲಿ 144 ಸೆಕ್ಷನ್ ಇದ್ದರೂ ಈಶ್ವರಪ್ಪ, ಅಲ್ಲಿನ ಸಂಸದರು ರ್ಯಾಲಿ ಮಾಡುತ್ತಾರೆ. ಅಲ್ಲಿ ನಡೆದ ಗಲಾಟೆಗೆ ಅವರೇ ಕಾರಣ. ಅವರ ಮೇಲೆ ಯಾಕೆ ಇನ್ನು ಕೇಸ್ ಹಾಕಿಲ್ಲ. ಸ್ಥಳೀಯ ಶಾಸಕರಾಗಿದ್ದರೆ ಅವರ ಮನೆಗೆ ಹೋಗಬೇಕಿತ್ತು. ಸದು ಬಿಟ್ಟು ಯಾರಾದರೂ ರ್ಯಾಲಿ ಮಾಡುತ್ತೇರಾ? ಇದನ್ನು ಸರ್ಮಥನೆ ಮಾಡಿಕೊಳ್ಳುವ ಗೃಹ ಸಚಿವ ಒಬ್ಬ ನಾಲಾಯಕ್ ಎಂದು ಡಿಕೆಶಿ ಕಿಡಿಕಾರಿದರು.

ಆಯುಕ್ತರ ಮೇಲೆ ಗರಂ: ಎಲ್ಲರಿಗೂ ಒಂದೇ ಕಾನೂನು ರಾಜ್ಯದಲ್ಲಿದೆ. ಆದರೆ ನಮ್ಮ ಫ್ಲೆಕ್ಸ್, ಬ್ಯಾನರ್ ತೆಗೆಸಿದ್ದಾರೆ. ಯಡಿಯೂರಪ್ಪ ಹುಟ್ಟು ಹಬ್ಬ, ಅಶ್ವತ್ ನಾರಾಯಣ್ ಹುಟ್ಟುಹಬ್ಬ, ಸೋಮಣ್ಣ ಹುಟ್ಟುಹಬ್ಬ, ಶಿವರಾತ್ರಿ ಹಬ್ಬದ ಬೋರ್ಡ್ ಹಾಕಿದ್ದಾರೆ. ನೀವು ಬಿಬಿಎಂಪಿ ಕಚೇರಿ ಬದಲು ಬಿಜೆಪಿ ಪಾರ್ಟಿ ಅಂತ ಬೋರ್ಡ್ ಹಾಕಿಕೊಳ್ಳಿ. ಕಾನೂನು ಎಲ್ಲರಿಗೂ ಒಂದೇ ಇರಬೇಕು ಎಂದು ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಮೇಲೆ ಡಿಕೆ ಶಿವಕುಮಾರ್ ಗರಂ ಆದರು.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ