Breaking News

ಟ್ರಾವೆಲ್ಸ್ ಹೆಸರಲ್ಲಿ ನೂರಾರು ಟ್ಯಾಕ್ಸಿ ಮಾಲಕರಿಗೆ ಪಂಗನಾಮ ಹಾಕಿ ಟ್ರಾವೆಲ್ಸ್ ಬಾಗಿಲು ಹಾಕಿ ಸುಮಾರು 10 ಕೋಟಿ ಮೌಲ್ಯದ ವಾಹನಗಳ ಜೊತೆ ಪರಾರಿ

Spread the love

ಬೆಂಗಳೂರು : ಟ್ರಾವೆಲ್ಸ್ ಹೆಸರಲ್ಲಿ ನೂರಾರು ಟ್ಯಾಕ್ಸಿ ಮಾಲಕರಿಗೆ ಪಂಗನಾಮ ಹಾಕಿ ಟ್ರಾವೆಲ್ಸ್ ಬಾಗಿಲು ಹಾಕಿ ಸುಮಾರು 10 ಕೋಟಿ ಮೌಲ್ಯದ ವಾಹನಗಳ ಜೊತೆ ಪರಾರಿಯಾದ ಘಟನೆ ನಡೆದಿದೆ.

ಬಾಗಲಗುಂಟೆ ಸಮೀಪದ ಎಂಇಐ ಲೆಯೊಟ್ ನಲ್ಲಿ ತಮಿಳುನಾಡು ಮೂಲದ ಶಿವಕುಮಾರ ಎಂಬಾತ ಆರ್ ಎಸ್ ಟ್ರಾವೆಲ್ಸ್ ಕಂಪನಿ ಆರಂಭಿಸಿದ್ದ,ಮೊದ ಮೊದಲು ಅಟ್ಯಾಚ ಹೆಸರಲ್ಲಿ ಕೆಲವು ವಾಹನಗಳಿಗೆ ತಿಂಗಳು ತಿಂಗಳು ಸರಿಯಾಗಿ ಬಾಡಿಗೆ ಕೊಡುತ್ತಾ ನಂಬಿಕೆ ಗಳಿಸಿದ್ದ.

ಈತನ ಮೇಲಿನ ನಂಬಿಕೆಯಿಂದ ಈತ ಬಳಿ ಟ್ಯಾಕ್ಸಿ ಬಿಟ್ಟಿದ್ದ ಮಾಲಕರು ತಮ್ಮ ಸ್ನೇಹಿತರ,ಹಾಗೂ ತಾವೇ ಬ್ಯಾಂಕ್ ಗಳಲ್ಲಿ ಸಾಲವನ್ನು ಮಾಡಿ ಹೊಸ ಗಾಡಿಗಳನ್ನು ಕೂಡಾ ಅಟ್ಯಾಚ ಮಾಡಿದ್ದಾರೆ.

ಇನ್ನೋವಾ, ಸ್ವೀಪ್ಟ್,ಇಟಿಯಸ್, ಹೀಗೆ ವಿವಿಧ ಕಂಪನಿಯ ಸುಮಾರು 90 ಕ್ಕಿಂತ ಹೆಚ್ಚು ವಾಹನಗಳ ಸಮೇತ ಇದೀಗ ಟ್ರಾವೆಲ್ಸ್ ಕಂಪನಿಯ ಮಾಲೀಕ ಶಿವಕುಮಾರ ನಾಪತ್ತೆಯಾಗಿದ್ದು.

ಇದೀಗ ಇತ್ತ ಟ್ಯಾಕ್ಸಿ ಇಲ್ಲದೇ ಬಾಡಿಗೆಯು ಇಲ್ಲದೇ ಟ್ಯಾಕ್ಸಿ ಮಾಲಕರು ಕಂಗಾಲಾಗಿದ್ದು ಮೋಸ ಮಾಡಿ ಓಡಿ ಹೋದ ಟ್ರಾವೆಲ್ಸ್ ಮಾಲೀಕನ ಮೇಲೆ ಬಾಗಲಕುಂಟೆ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ


Spread the love

About Laxminews 24x7

Check Also

ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ಜನ್ಮದಿನ ನಿಮಿತ್ಯ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 4000 ಜನ ಉಚ್ಚಾರಿಸಿಕೊಂಡರು.

Spread the love ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ಜನ್ಮದಿನ ನಿಮಿತ್ಯ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ