Breaking News

388ಕ್ಕೆ ಏರಿದ ಸೋಂಕಿತರ ಸಂಖ್ಯೆ – ಮೈಸೂರಿನಲ್ಲಿ ನಾಲ್ವರಿಗೆ ಕೊರೊನಾ

Spread the love

ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇವತ್ತು ನಾಲ್ವರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 388ಕ್ಕೆ ಏರಿಕೆ ಕಂಡಿದೆ.

ಬೆಳಗ್ಗೆ ಒಟ್ಟು ನಾಲ್ವರಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ದೆಹಲಿಗೆ ತಬ್ಲಿಘಿ ಜಮಾತ್‍ಗೆ ಹೋಗಿದ್ದ ಮೈಸೂರಿನ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನೂ ನಂಜನಗೂಡಿನ ಇಬ್ಬರಲ್ಲಿ ಸೋಂಕು ಇರುವುದು ದೃಢವಾಗಿದೆ.

ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 4 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸಂಖ್ಯೆ 388ಕ್ಕೆ ಏರಿದೆ. ಇಂದಿನವರೆಗೆ 105 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂಬುದು ಸಮಾಧಾನದ ವಿಷಯವಾಗಿದೆ. View image on Twitter

ಸೋಂಕಿತರ ವಿವರ:
1. ರೋಗಿ- 385: 46 ವರ್ಷದ ಪುರುಷ, ಮೈಸೂರು ನಿವಾಸಿ. ದೆಹಲಿಗೆ ಪ್ರಯಾಣ ಮಾಡಿದ್ದ.
2. ರೋಗಿ- 386: 20 ವರ್ಷದ ಯುವಕ, ಮೈಸೂರು ನಿವಾಸಿ. ದೆಹಲಿಗೆ ಪ್ರಯಾಣ ಮಾಡಿದ್ದ.
3. ರೋಗಿ- 387: 39 ವರ್ಷದ ಪುರುಷ, ಮೈಸೂರಿನ ನಂಜನಗೂಡು ನಿವಾಸಿ. ರೋಗಿ ನಂಬರ್ 52ರ ದ್ವಿತೀಯ ಸಂಪರ್ಕ.
4. ರೋಗಿ- 388: 23 ವರ್ಷದ ಯುವತಿ, ಮೈಸೂರಿನ ನಂಜನಗೂಡು ನಿವಾಸಿ. ರೋಗಿ ನಂಬರ್ 319ರ ಸಂಪರ್ಕ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ