Breaking News

ಟಿಳಕವಾಡಿ ಪೊಲೀಸರ ಕಾರ್ಯಾಚರಣೆ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಬಂಧನ

Spread the love

ಬೆಳಗಾವಿ ನಗರದಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಆರೋಪಿಯನ್ನು ಬಂಧಿಸಿರುವ ಟಿಳಕವಾಡಿ ಠಾಣೆ ಪೊಲೀಸರು 9 ಲಕ್ಷ ರೂ. ಮೌಲ್ಯದ 11 ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ.

ಖಡೇಬಜಾರ ಉಪವಿಭಾಗ ಎಸಿಪಿ ಚಂದ್ರಪ್ಪ ಹಾಗೂ ಪಿಐ ಟಿಳಕವಾಡಿ ರಾಘವೇಂದ್ರ ಹವಾಲದಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿ ಮಕಬುಲ ಅಹ್ಮದ @ಅಸ್ಲಂ. ತಂದೆ ಮೆಹಬೂಸಾಬ ಬಿಕ್ಕನಬಾಯಿ (೨೭) (ಸಾ|| ಬೀರಬಲ್ ಓಣಿ ಹುಬ್ಬಳ್ಳಿ ಹಾಲಿ: ಹಾಲಿ ಹಳೆ ಹುಬ್ಬಳ್ಳಿ) ಈತನನ್ನು ವಶಕ್ಕೆ ಪಡೆದು ಆತನಿಂದ ಸುಮಾರು 9 ಲಕ್ಷ ರೂ. ಮೌಲ್ಯದ 11 ವಿವಿಧ ಕಂಪನಿಯ ಮೋಟರ್ ವಾಹನಗಳನ್ನು ವಶಕ್ಕೆ ಪಡೆದುಕೊಂಡು ತಿಳಕವಾಡಿ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ. ದ್ವಿಚಕ್ರ ವಾಹನ ಕಳ್ಳನನ್ನ ಪತ್ತೆ ಮಾಡುವಲ್ಲಿ ಶ್ರಮಿಸಿದ ತಿಳಕವಾಡಿ ಠಾಣೆಯ ಸಿಬ್ಬಂದಿಯನ್ನು ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಶ್ಲಾಘಿಸಿದ್ದಾರೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ