Breaking News
Home / ಸಿನೆಮಾ / ಸಲ್ಮಾನ್ ಖಾನ್ ನಿರ್ಮಿಸಿ ನಟಿಸುತ್ತಿರುವ ‘ಅಂತಿಮ್’ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ

ಸಲ್ಮಾನ್ ಖಾನ್ ನಿರ್ಮಿಸಿ ನಟಿಸುತ್ತಿರುವ ‘ಅಂತಿಮ್’ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ

Spread the love

ಕೆಜಿಎಫ್ ಚಾಪ್ಟರ್ 1 ಚಿತ್ರದೊಂದಿಗೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ರವಿ ಬಸ್ರೂರ್‌ಗೆ ಬಾಲಿವುಡ್‌ನಿಂದ ಹೆಚ್ಚು ಆಫರ್ ಬರ್ತಿದೆ. ಒಂದರ ಹಿಂದೆ ಮತ್ತೊಂದು ಎನ್ನುವಂತೆ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡ್ತಿದ್ದಾರೆ ಬಸ್ರೂರ್. ಇದೀಗ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿರ್ಮಿಸಿ ನಟಿಸುತ್ತಿರುವ ‘ಅಂತಿಮ್’ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನಿರ್ದೇಶಿಸುತ್ತಿದ್ದಾರೆ.

ಈ ಕುರಿತು ಸ್ವತಃ ರವಿ ಬಸ್ರೂರ್ ತಮ್ಮ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ”ಭಾರತದ ಬಾಯಿಜಾನ್ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುತ್ತಿರುವುದು ಬಹಳ ಸಂತಸ ತಂದಿದೆ. ಸಲ್ಮಾನ್ ಖಾನ್ ಅವರ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತ ಹಾಗೂ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದೇನೆ. ಈ ನನ್ನ ಜರ್ನಿಗೆ ನಿಮ್ಮ ಬೆಂಬಲ ಹೀಗೆ ಇರಲಿ” ಎಂದು ಖುಷಿ ಹಂಚಿಕೊಂಡಿದ್ದಾರೆ.

ಅಂತಿಮ್: ದಿ ಫೈನಲ್ ಟ್ರೂತ್ ಚಿತ್ರವನ್ನು ಮಹೇರ್ಶ ಮಂಜ್ರೆಕರ್ ನಿರ್ದೇಶಿಸುತ್ತಿದ್ದು, ಸಲ್ಮಾನ್ ಖಾನ್ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಆಯುಷ್ ಶರ್ಮಾ ನಾಯಕನಾಗಿದ್ದು, ಪ್ರಗ್ಯಾ ಜೈಸ್ವಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

 

 

ಬಾಲಿವುಡ್‌ನಲ್ಲಿ ಬಸ್ರೂರ್ ಜರ್ನಿ

ಕೆಜಿಎಫ್ ಚಿತ್ರಕ್ಕೂ ಮೊದಲು ಒಳ್ಳೊಳ್ಳೆ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ನೀಡಿದ್ದ ರವಿ ಬಸ್ರೂರ್‌ಗೆ ಯಶ್ ಸಿನಿಮಾ ಪ್ಯಾನ್ ಇಂಡಿಯಾ ಪಟ್ಟ ತಂದು ಕೊಡ್ತು. ಪರಭಾಷೆಯಲ್ಲಿ ಬಸ್ರೂರ್ ಹೆಸರು ಸದ್ದು ಮಾಡಲು ಶುರುವಾಯ್ತು. ಆ ಬಳಿಕ ಕನ್ನಡದ ಜೊತೆ ಜೊತೆಗೆ ತಮಿಳು, ಮಲಯಾಳಂ ಹಾಗೂ ಹಿಂದಿ ಇಂಡಸ್ಟ್ರಿ ಕಡೆಯೂ ರವಿ ಬಸ್ರೂರ್ ಸಂಗೀತ ಜರ್ನಿ ಹೆಜ್ಜೆ ಹಾಕಿದೆ.

ಸುಭಾಷ್ ಕಾಳೆ ಜೊತೆ ಕೈ ಜೋಡಿಸಿರುವ ಅಜಯ್ ಕಪೂರ್ ಅಫ್ಘಾನ್ ಬಿಕ್ಕಟ್ಟು ಕುರಿತು ಸಿನಿಮಾ ಮಾಡಲಾಗುತ್ತಿದ್ದು, ನೈಜ ಈ ಚಿತ್ರಕ್ಕೆ ‘ಗರುಡ್’ ಎಂದು ಹೆಸರಿಡಲಾಗಿದೆ. ಕಥೆ-ಪರಿಕಲ್ಪನೆ ಸುಭಾಷ್ ಕಾಳೆ ಹಾಗೂ ನಿಧಿ ಸಿಂಗ್ ಧರ್ಮ ಚಿತ್ರಕಥೆ ರಚಿಸಲಿದ್ದಾರೆ. ಈ ಸಿನಿಮಾದಲ್ಲಿ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತವಿದೆ ಎಂದು ಪೋಸ್ಟರ್‌ನಲ್ಲಿ ತಿಳಿಸಲಾಗಿದೆ.

 

ಇದಕ್ಕೂ ಮುಂಚೆ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿರುವ ಹಿಂದಿ ಸಿನಿಮಾದ ಹೆಸರು ಯುಧ್ರಾ. ‘ಗಲ್ಲಿ ಬಾಯ್’ ಸಿನಿಮಾ ಮೂಲಕ ದೇಶದ ಗಮನ ಸೆಳೆದಿದ್ದ ನಟ ಸಿದ್ಧಾರ್ಥ್ ಚತುರ್ವೇದಿ ಮತ್ತು ‘ಮಾಸ್ಟರ್’ ಸಿನಿಮಾದ ನಾಯಕಿ ಮಾಳವಿಕಾ ಮೋಹನ್ ‘ಯುಧ್ರಾ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಬಾಲಿವುಡ್ ನಟ ಫರಾನ್ ಅಖ್ತಾರ್ ಮತ್ತು ರಿತೇಶ್ ಸಿಧ್ವಾನಿ ನಿರ್ಮಿಸಿದ್ದಾರೆ. ದಿವಂಗತ ನಟಿ ಶ್ರಿದೇವಿ ನಟನೆಯ ‘ಮಾಮ್’ ಚಿತ್ರ ನಿರ್ದೇಶಿಸಿದ್ದ ರವಿ ಉದಯವರ್ ಯುಧ್ರಾ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇನ್ನು ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೂ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಉಪೇಂದ್ರ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ಗೂ ಬಸ್ರೂರ್ ಸಂಗೀತವಿದೆ. ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಲಾರ್ ಚಿತ್ರಕ್ಕೂ ಬಸ್ರೂರ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಇವುಗಳ ಜೊತೆಗೆ ತುಳು, ತಮಿಳು ಮತ್ತು ಮಲಯಾಳಂ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಕೆಪಿಸಿಸಿಯಿಂದ ಆರು ವರ್ಷಗಳ ಕಾಲ ಉಚ್ಛಾಟಿತ ಆಗಿರುವ ಎಂ.ಎ. ಸಲೀಂ ಡಿ.ಕೆ. ಶಿವಕುಮಾರ್ ಅವರಿಗೆ ಕೈಮುಗಿದು ಕ್ಷಮೆ ಕೋರಿದ್ದಾರೆ.

Spread the loveಕೆಪಿಸಿಸಿಯಿಂದ ಆರು ವರ್ಷಗಳ ಕಾಲ ಉಚ್ಛಾಟಿತ ಆಗಿರುವ ಎಂ.ಎ. ಸಲೀಂ ಡಿ.ಕೆ. ಶಿವಕುಮಾರ್ ಅವರಿಗೆ ಕೈಮುಗಿದು ಕ್ಷಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ