Breaking News

ಅನುಮಾನಸ್ಪದ ಸೂಟ್ಕೇಸ್​: ಒಂದರಲ್ಲಿ ‘ಮೋದಿ ಜಾಕೆಟ್’, ಮತ್ತೊಂದರಲ್ಲಿ ಸೀರೆ ಪತ್ತೆ

Spread the love

ಬೆಂಗಳೂರು: ನಗರದ ಬಿವಿಕೆ ಅಯ್ಯಂಗರ್ ರಸ್ತೆಯಲ್ಲಿ ಅನುಮಾಸ್ಪದವಾಗಿ ಸಿಕ್ಕಿದ್ದ ಸೂಟ್ಕೇಸ್​ ಪತ್ತೆ ಪ್ರಕರಣದಲ್ಲಿ ಆತಂಕ ದೂರವಾಗಿದ್ದು, ಸೂಟ್ಕೇಸ್​​ನಲ್ಲಿ ಬಟ್ಟೆಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಯ್ಯಂಗರ್ ರಸ್ತೆಯಲ್ಲಿ ಬೈಕ್​ ಒಂದರ ಮೇಲೆ ಸೂಟ್ ಕೇಸ್ ಪತ್ತೆಯಾಗುತ್ತಿದ್ದ ಕಾರಣ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳೀಯರು ಕರೆ ಮಾಡಿ ಪಶ್ಚಿಮ‌ ವಿಭಾಗದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಸ್ಥಳಕ್ಕೆ ಆಗಮಿಸಿದ್ದ ಬಾಂಬ್​ ನಿಷ್ಕ್ರಿಯ ದಳದ ಸಿಬ್ಬಂದಿ ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಿಂದ ಸೂಟ್ ಕೇಸ್ ಅನ್ನು ಫ್ರೀಡಂ ಪಾರ್ಕ್​​ಗೆ ತಂದಿದ್ದರು. ಈ ವೇಳೆ ಸೂಟ್ಕೇಸ್​ ಓಪನ್ ಮಾಡಿ ನೋಡಿದ ವೇಳೆ ಅದರಲ್ಲಿ ಬಟ್ಟೆಗಳು ಮಾತ್ರ ಪತ್ತೆಯಾಗಿದೆ.

 

 ಸೂಟ್ ಕೇಸ್ ಓನರ್ ಸಿಕ್ಕದ್ದಲ್ಲಿ ವಿಚಾರಣೆ ಮುಂದುವರೆಸ್ತೀವಿ..

ಈ ಕುರಿತು ಮಾಹಿತಿ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್, ಮಧ್ಯಾಹ್ನ ೧.೨೦ ಸಮಯಕ್ಕೆ ನಮಗೆ ಮಾಹಿತಿ ಬಂದಿತ್ತು. ಅಂಗಡಿ ಮಾಲೀಕರೊಬ್ಬರ ಬೈಕ್ ನಲ್ಲಿ ಸೂಟ್ಕೇಸ್ ಪತ್ತೆಯಾಗಿತ್ತು. ಯಾರೋ ಬೈಕ್ ಮೇಲೆ ಸೂಟ್ಕೇಸ್ ಇಟ್ಟು ಹೋಗಿದ್ದರು. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಸ್ಫೋಟಕ ಇಲ್ಲ ಅಂಥ ಗೊತ್ತಾಗಿತ್ತು. ಬಟ್ಟೆ ಬರೆ ಹಾಗೂ ಐಡಿ ಕಾರ್ಡ್ ಪತ್ತೆಯಾಗಿದೆ. ಸದ್ಯ ಸ್ಥಳೀಯ ಏರಿಯಾದ ಸಿಸಿಟಿವಿ ಚೆಕ್ ಮಾಡ್ತಿದ್ದೀವಿ. ಸೂಟ್ ಕೇಸ್ ಓನರ್ ಸಿಕ್ಕದ್ದಲ್ಲಿ ವಿಚಾರಣೆ ಮುಂದುವರೆಸ್ತೀವಿ. ಸೂಟ್ ಕೇಸ್ ಪರಿಶೀಲನೆ ವೇಳೆ 200 ಮೀಚರ್ ದೂರದಲ್ಲಿ ಮತ್ತೊಂದು ಸೂಟ್ ಕೇಸ್ ಪತ್ತೆಯಾಗಿತ್ತು. ಪತ್ತೆಯಾದ ಒಂದು ಸೂಟ್ ಕೇಸ್ ನಲ್ಲಿ ಮೋದಿ ಜಾಕೆಟ್ ಪತ್ತೆಯಾಗಿದ್ದು, ಮತ್ತೊಂದರಲ್ಲಿ ಸೀರೆ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ