Breaking News

ಸರಕಾರಿ ಕಾಲೇಜುಗಳಲ್ಲಿ ದಾಖಲಾತಿ ದಾಖಲೆ!

Spread the love

ಬೆಂಗಳೂರು: ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ಹೊಸ ದಾಖಲೆ ಸೃಷ್ಟಿಸಿದ್ದು, ಉನ್ನತ ಶಿಕ್ಷಣದ ದಾಖಲಾತಿಯೂ ಹೆಚ್ಚಿದೆ.

ದ್ವಿತೀಯ ಪಿಯುಸಿಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿ ರುವುದರಿಂದ ಪದವಿ, ವೃತ್ತಿಪರ ಕೋರ್ಸ್‌ಗಳಲ್ಲಿಯೂ ದಾಖಲಾತಿ ಹೆಚ್ಚಲಿದೆ ಎಂಬ ನಿರೀಕ್ಷೆಯನ್ನು ಈ ಹಿಂದೆಯೇ ಸರಕಾರ ಮಾಡಿತ್ತು. ಈಗ ಸರಕಾರಿ ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಅಕ್ಟೋಬರ್‌ ಮೊದಲ ವಾರದ ವರೆಗೂ ಅವಕಾಶ ನೀಡಲಾಗಿದೆ. ರಾಜ್ಯದ 330 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈಗಾಗಲೇ 1.45 ಲಕ್ಷ ವಿದ್ಯಾರ್ಥಿಗಳು ದಾಖ ಲಾತಿ ಪಡೆದಿದ್ದಾರೆ.

ಪ್ರತೀ ವರ್ಷ ಸರಕಾರಿ ಪದವಿ ಕಾಲೇಜುಗಳಲ್ಲಿ 1.15 ಲಕ್ಷದಿಂದ 1.20 ಲಕ್ಷದ ವರೆಗೆ ದಾಖಲಾತಿ ಆಗುತ್ತಿತ್ತು. 2021-22ನೇ ಸಾಲಿಗೆ ಈಗಾಗಲೇ 1.45 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಮಾಹಿತಿ ಅಪ್‌ಡೇಟ್‌ ನಡೆಯುತ್ತಿರುವುದರಿಂದ 1.60 ಲಕ್ಷದ ವರೆಗೂ ದಾಖಲಾತಿ ಆಗುವ ಸಾಧ್ಯತೆಯಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ ದ್ದಾರೆ.

ವಾಣಿಜ್ಯ, ಕಲಾ ವಿಭಾಗಕ್ಕೆ ಆದ್ಯತೆ
ಪದವಿಯಲ್ಲಿ ಕಲಾ ಮತ್ತುವಾಣಿಜ್ಯಕ್ಕೆ ಬೇಡಿಕೆ ಹೆಚ್ಚಿದೆ. ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿ ಗಳು ಕೂಡ ಪದವಿಯಲ್ಲಿ ಬಿ.ಕಾಂ, ಬಿಬಿಎಂ ಮೊದಲಾದ ವಾಣಿಜ್ಯ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ. ಎನ್‌ಇಪಿ ಅನುಷ್ಠಾನವಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಆಯ್ಕೆಯೂ ಹೆಚ್ಚಿದೆ. ಗ್ರಾಮೀಣ ಮತ್ತು ನಗರ ಭಾಗದಲ್ಲಿ ವಾಣಿಜ್ಯ ವಿಭಾಗವೇ ವಿದ್ಯಾರ್ಥಿಗಳ ಮೊದಲ ಆಯ್ಕೆಯಾಗಿದೆ. ಶೇ. 45ಕ್ಕೂ ಅಧಿಕ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿದ್ದಾರೆ. ವಿದ್ಯಾರ್ಥಿಗಳ ದಾಖಲಾತಿಗೆ ಅನುಗುಣವಾಗಿ ಇನ್‌ಟೇಕ್‌ ಹೆಚ್ಚಿಸುವ ಕ್ರಮ ಕೂಡ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಸರಕಾರಿ ಕಾಲೇಜುಗಳಲ್ಲಿ ದಾಖಲಾತಿ ನಡೆಯುತ್ತಲೇ ಇದೆ. ಸುಮಾರು 2 ಲಕ್ಷ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆಯುವ ಸಾಧ್ಯತೆಯಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಹೆಚ್ಚಿಸಿಕೊಳ್ಳಲು ಸೂಚನೆ ನೀಡಿದ್ದೇವೆ.
-ಪಿ. ಪ್ರದೀಪ್‌, ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

-ರಾಜು ಖಾರ್ವಿ ಕೊಡೇರಿ


Spread the love

About Laxminews 24x7

Check Also

ಕೊಲ್ಲಿ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ಕೇಂದ್ರಕ್ಕೆ ಪತ್ರ: ಪರಮೇಶ್ವರ್‌

Spread the loveಬೆಂಗಳೂರು: ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ  ಕೊಲ್ಲಿ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್‌ ಕರೆದುಕೊಂಡು ಬರಲು ಕೇಂದ್ರ ಸರ್ಕಾರಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ