Breaking News

ಮನಸ್ಸಿದ್ದರೆ ವಯಸ್ಸಿನ ಹಂಗೇಕೆ? ಬಾಳ ಇಳಿ ಸಂಜೆಯಲ್ಲಿ ಜತೆಯಾದರು- ಮಗನೇ ಮಾಡಿಸಿದ ಅಪ್ಪನ ಮದುವೆ

Spread the love

ಸಾಂಗ್ಲಿ (ಮಹಾರಾಷ್ಟ್ರ): ಮದುವೆ ಎನ್ನುವುದು ಎಲ್ಲರಿಗೂ ದೇಹ ಸುಖವೇ ಆಗಬೇಕೆಂದಿಲ್ಲ. ಬಾಳಿನ ಇಳಿ ಸಂಜೆಯಲ್ಲಿ ಬದುಕಿಗೆ ಆಧಾರವಾಗಿ ಇರಲು ಸಾಧ್ಯವಾಗುವುದು ಗಂಡ-ಹೆಂಡತಿ ಎಂಬ ಜೋಡಿ ಇದ್ದಾಗಲೇ. ಆದರೆ ಪತಿ- ಪತ್ನಿ ತೀರಿ ಹೋದಾಗ ಅಥವಾ ವಿಚ್ಛೇದನ ಪಡೆದಾಗ ಮತ್ತೊಮ್ಮೆ ಮದುವೆಯಾಗುವವರಿಗೆ ಸ್ವಲ್ಪ ವಯಸ್ಸಾಗಿದ್ದರೆ ಎಷ್ಟೋ ಮಂದಿ ಅಂಥವರನ್ನು ವಿಚಿತ್ರ ದೃಷ್ಟಿಯಿಂದ ನೋಡುವುದು ಇಂದಿಗೂ ಉಂಟು.

ಆದರೆ ಇವನ್ನೆಲ್ಲಾ ಮೀರಿ ಖುದ್ದು ಮಗನೇ ಮುಂದೆ ನಿಂತು 79 ವರ್ಷ ವಯಸ್ಸಿನ ತಮ್ಮ ತಂದೆಗೆ ಮದುವೆ ಮಾಡಿಸಿದ್ದಾರೆ. ಇದು ನಡೆದಿರುವುದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ. 79 ವರ್ಷದ ನಿವೃತ್ತ ಶಿಕ್ಷಕ ದಾದಾಸಾಹೇಬ್​​ ಸಾಲುಂಖೆ ಹಾಗೂ 66 ವರ್ಷದ ವಿಧವೆ ಶಾಲಿನಿ ಮದುವೆಯಾದವರು.

ವೃದ್ಧದಾದಾಸಾಹೇಬ್​ ಸಾಲುಂಖೆ ಪತ್ನಿ ಕಳೆದುಕೊಂಡು ಹಲವು ವರ್ಷಗಳೇ ಕಳೆದಿದ್ದವು. ಅವರ ಮಗ ಬೇರೆಡೆ ವಾಸವಾಗಿದ್ದರು. ಒಂಟಿಯಾಗಿ ವಾಸವಿಗಿದ್ದರಿಂದ ಇಳಿ ವಯಸ್ಸಲ್ಲಿ ಜೋಡಿಯ ಅವಶ್ಯಕತೆ ಎನ್ನಿಸಿತು. ಮಗನಿಗೆ ಈ ವಿಷಯ ತಿಳಿಸಿದಾಗ ಅದಕ್ಕೆ ಒಪ್ಪಿದ ಅವರು, ವಧುವಿಗಾಗಿ ಹಲವೆಡೆ ವಿಚಾರಿಸಿದ್ದಾರೆ. ಆದರೆ ಎಲ್ಲಿಯೂ ಸಿಗಲಿಲ್ಲ. ನಂತರ ಮೀರಜ್ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವ ಅಸ್ತಾ ಬೇಗಾರ್ ಕೇಂದ್ರದ ( ನಿರ್ಗತಿಕ ಮಹಿಳೆಯರ ಕೇಂದ್ರ) ಇಲ್ಲಿ ಹೋದಾಗ ಅಲ್ಲಿ ಅವರಿಗೆ ಶಾಲಿನಿ ಎಂಬುವರರ ಬಗ್ಗೆ ತಿಳಿಯುತ್ತದೆ.

ಅವರು ಕೂಡ ವಿಧವೆಯಾಗಿದ್ದು, ಮದುವೆಗೆ ಒಪ್ಪಿಕೊಳ್ಳುತ್ತಾರೆ. ಹೀಗೆ ಇವರಿಬ್ಬರ ಮದುವೆಯನ್ನು ಮಗ ಮಾಡಿಸಿದ್ದಾನೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ