Breaking News

ರಸ್ತೆ ಮಧ್ಯೆಯೇ ಆಟೋ ತಡೆದ ಪೊಲೀಸ್ರು- ತಂದೆಯನ್ನು ಎತ್ತಿಕೊಂಡೇ ನಡೆದ ಮಗ

Spread the love

ತಿರುವನಂತಪುರಂ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮಾಡಲಾಗಿದ್ದ ಲಾಕ್ ಡೌನ್ ಅನ್ನು ಮೇ.3ರವರೆಗೆ ವಿಸ್ತರಿಸಲಾಗಿದೆ. ಈ ಮಧ್ಯೆ ಕೆಲವೊಂದು ಮನಕಲಕುವ ಘಟನೆಗಳು ನಡೆದಿವೆ. ಇದಕ್ಕೆ ಕೇರಳದಲ್ಲಿ ನಡೆದ ಒಂದು ಘಟನೆಯೇ ಸಾಕ್ಷಿ.

ಹೌದು. ಆಸ್ಪತ್ರೆಯಿಂಂದ ಡಿಸ್ಚಾರ್ಜ್ ಆದ ವ್ಯಕ್ತಿ ಮನೆಗೆ ವಾಪಸ್ ಹೋಗುತ್ತಿದ್ದಾಗ ಪೊಲೀಸರು ಆಟೋ ತಡೆದಿದ್ದಾರೆ. ಇದರಿಂದಾಗಿ ತಂದೆಯನ್ನು ಮಗನೇ ಎತ್ತಿಕೊಂಡು ಹೋಗಿ ಮನೆ ತಲುಪಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಕೊಲ್ಲಂ ಸಮೀಪದ 65 ವರ್ಷದ ವೃದ್ಧ ಅನಾರೋಗ್ಯದಿಂದಾಗಿ ಪುನಕಲುರ್ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬುಧವಾರ ಡಿಸ್ಚಾರ್ಜ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಮಗ ತನ್ನ ವೃದ್ಧ ತಂದೆಯನ್ನು ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ದಾರಿ ಮಧ್ಯೆ ಪೊಲೀಸರು ತಡೆದಿದ್ದಾರೆ. ಆಗ ಡಿಸ್ಚಾರ್ಜ್ ಆದ ಕುರಿತು ಆಸ್ಪತ್ರೆಯ ದಾಖಲೆಗಳನ್ನು ವೃದ್ಧನ ಮಗ ತೋರಿಸದರೂ ಪೊಲೀಸರು ಮುಂದೆ ಹೋಗಲು ಬಿಡಲಿಲ್ಲ. ಇದನ್ನೂ ಓದಿ: ವಿಡಿಯೋ: ರಸ್ತೆಯಲ್ಲಿ ಚೆಲ್ಲಿದ ಹಾಲನ್ನು ಹಂಚಿಕೊಂಡ ಶ್ವಾನ, ಮಾನವ

ಅಲ್ಲದೆ ಆಟೋದೊಳಗಿದ್ದ ಕುಟುಂಬವನ್ನು ಪೊಲೀಸರು ಇಳಿಯುವಂತೆ ಹೇಳಿದರು. ಹೀಗಾಗಿ ಮುಂದೆ ಹೋಗಲು ಪೊಲೀಸರು ಬಿಡದಿದ್ದರಿಂದ 1 ಕಿ.ಮೀ ನಡೆದುಕೊಂಡು ಹೋಗುವುದೇ ಅನಿವಾರ್ಯ ಎದುರಾಯಿತು. ಒಟ್ಟಿನಲ್ಲಿ ಪೊಲೀಸರ ವರ್ತನೆಯಿಂದ ಬೇಸರಗೊಂಡು ವ್ಯಕ್ತಿ ತನ್ನ ತಂದೆಯನ್ನು ಎತ್ತಿಕೊಂಡೇ ಮುಂದೆ ಸಾಗಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ