Breaking News

ರಾಹುಲ್‌ರನ್ನು ಮೊದಲು ನೋಡಿದ್ದು ನಾನೇ

Spread the love

ವಯನಾಡ್‌/ನವದೆಹಲಿ:ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯವರಿಗೆ ಜನ್ಮ ನೀಡುವಾಗ ಹೆರಿಗೆ ಮಾಡಿಸಿದ್ದ ನರ್ಸ್‌ ರಾಜಮ್ಮ ವವಾತಿಲ್‌ ಎಂಬುವರು ಅವರನ್ನು ಭೇಟಿಯಾಗಿದ್ದಾರೆ.

ಜತೆಗೆ ಅವರಿಗೆ ಸಿಹಿ ಇರುವ ಬಾಕ್ಸ್‌ ನೀಡಿ, ತಾಯಿ ಸೋನಿಯಾ ಮತ್ತು ಕುಟುಂಬದ ಇತರ ಸದಸ್ಯರ ಆರೋಗ್ಯ ವಿಚಾರಿಸಿದ್ದಾರೆ.

 

ವಯನಾಡ್‌ ಸಂಸದರಾಗಿರುವ ರಾಹುಲ್‌ ಕ್ಷೇತ್ರ ಪ್ರವಾಸ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. “1970ರಲ್ಲಿ ನವದೆಹಲಿಯ ಹೋಲಿಸ್‌ ಫ್ಯಾಮಿಲಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದೆ. ರಾಹುಲ್‌ ಅದೇ ಆಸ್ಪತ್ರೆ ಯಲ್ಲಿ ಜನಿಸಿದ್ದರು. ರಾಹುಲ್‌ನ್ನು ಎಲ್ಲರಿಗಿಂತ ಮೊದಲು ನೋಡಿದ್ದು ನಾನೇ’ ಎಂದು ಅವರು ರಾಹುಲ್‌ ಕೈ ಹಿಡಿದುಕೊಂಡು ಜನರಿಗೆ ತಿಳಿಸಿದ್ದಾರೆ.

ರಾಹುಲ್‌ಗೆ ಸಿಹಿ ಇರುವ ಬಾಕ್ಸ್‌ ಕೊಟ್ಟು, “ನಿಮಗೆ ಸ್ವೀಟ್‌ ಬಾಕ್ಸ್‌ ಕೊಡಬೇಕೆಂದರೆ ನಿಮ್ಮ ರಕ್ಷಣಾ ಸಿಬ್ಬಂದಿ ಬಿಡು ತ್ತಿಲ್ಲ. ನನ್ನ ಮನೆ ಇಲ್ಲೇ ಇದೆ’ ಎಂದು ಮನೆಯತ್ತ ಕೈ ತೋರಿಸಿದ್ದಾರೆ. ರಾಹುಲ್‌ ಅವರೊಂದಿಗೆ ಸಂತಸದಿಂದ ಮಾತನಾಡಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ