Breaking News

ಪುನೀತ್ ‘ಜೇಮ್ಸ್’ ಸಿನಿಮಾದಲ್ಲಿ ‘ಘಟೋತ್ಕಚ’ ಖ್ಯಾತಿಯ ಕೇತನ್

Spread the love

ಪವರ್ ಸ್ಟಾರ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಜೇಮ್ಸ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮತ್ತಷ್ಟು ತಡವಾಗಿದೆ.

ಇದೀಗ ಪವರ್ ಸ್ಟಾರ್ ಲಾಕ್ ಡೌನ್ ಮುಗಿಸಿ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಜೇಮ್ಸ್ ಪಕ್ಕಾ ಆಕ್ಷನ್ ಸಿನಿಮಾವಾಗಿದ್ದು, ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳು ಚಿತ್ರದಲ್ಲಿದೆ. ಜುಲೈ 5ರಿಂದ ಚಿತ್ರೀಕರಣ ಪ್ರಾರಂಭ ಮಾಡಿರುವ ಜೇಮ್ಸ್ ತಂಡದ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿ ಹೊರಬಿದ್ದಿದೆ.

 

ಚಿತ್ರಕ್ಕೆ ಘಟೋತ್ಕಚ ಖ್ಯಾತಿಯ ನಟ ಕೇತನ್ ಕರಾಂಡೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಕೇತನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಕೇತನ್ ಜೇಮ್ಸ್ ತಂಡ ಸೇರಿಕೊಂಡಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರಕ್ಕೆ ಖ್ಯಾತ ಸ್ಟಂಟ್ ಕಲಾವಿದರಾದ ರಾಮ್-ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದಾರೆ.

ಅಂದಹಾಗೆ ಕೇತನ್‌ಗೆ ಇದು ಎರಡನೇ ಕನ್ನಡ ಸಿನಿಮಾ ಈ ಮೊದಲು ಚೇತನ್ ನಿರ್ದೇಶನದ ಭರ್ಜರಿ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಮತ್ತೆ ಜೇಮ್ಸ್ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಹಿಂದಿ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿರುವ ಕೇತನ್ ಸಿನಿಮಾ ಜೊತೆಗೆ ಟಿವಿಯಲ್ಲೂ ಫೇಮಸ್.

ಮಹಾಭಾರತ ಧಾರಾವಾಹಿಯಲ್ಲಿ ಕೇತನ್, ಘಟೋತ್ಕಚ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ತಂದುಕೊಟ್ಟಿತ್ತು. ಇದಲ್ಲದೇ ಇನ್ನು ಅನೇಕ ಧಾರಾವಾಹಿಗಳಲ್ಲಿ ಕೇತನ್ ನಟಿಸಿದ್ದಾರೆ. ಬಾಡಿ ಬಿಲ್ಡರ್ ಮತ್ತು ನಟ ಕೇತನ್ ಇದೀಗ ಪವರ್ ಸ್ಟಾರ್ ಎದುರು ನಟಿಸುತ್ತಿದ್ದು, ಇಬ್ಬರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಜೇಮ್ಸ್ ಸದ್ಯ ಟಾಕಿ ಭಾಗ, ಹಾಡು, ಆಕ್ಷನ್ ಸೇರಿದಂತೆ 30ರಷ್ಟು ಚಿತ್ರೀಕರಣ ಭಾಗಿ ಉಳಿದಿದೆ. ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾಗಿ ಪ್ರೀಯಾ ಆನಂದ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಉಳಿದಂತೆ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್ ಹಾಗೂ ಆದಿತ್ಯ ಮೆನನ್, ಅನು ಪ್ರಭಾಕರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.


Spread the love

About Laxminews 24x7

Check Also

ಮಕ್ಕಳ ಜೊತೆಗೆ ಮಕ್ಕಳಾದ ಡಿಸಿ ಮಕ್ಕಳಿಗೆ ಚನ್ನಾಗಿ ಅಭ್ಯಾಸ ಮಾಡಿ, ನನ್ನಂತೆ ಜಿಲ್ಲಾಧಿಕಾರಿ ಆಗುವಂತೆ ಸ್ಫೂರ್ತಿ

Spread the loveಕಳೆದ 11 ವರ್ಷಗಳಿಂದ ಒಕ್ಕುಂದ ಉತ್ಸವ ಆಚರಿಸುತ್ತಿರುವ ಗ್ರಾಮಸ್ಥರನ್ನು ಶ್ಲಾಘಿಸಿದ ಡಿಸಿ ಮೊಹಮ್ಮದ್ ರೋಷನ್ ಅವರು ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ