Breaking News

ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ನಡುವೆ ಮತ್ತೊಂದು ಅಪಾಯಕಾರಿ ಗ್ರೀನ್ ಫಂಗಸ್ ಪ್ರಕರಣ ಪತ್ತೆ

Spread the love

ನವದೆಹಲಿ: ಕೊರೊನಾ ಸೋಂಕಿನ ನಡುವೆ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಗಳು ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಗ್ರೀನ್ ಫಂಗಸ್ ಎಂಬ ಮತ್ತೊಂದು ಅಪಾಯಕಾರಿ ಫಂಗಸ್ ಭಾರತದಲ್ಲಿ ಪತ್ತೆಯಾಗಿದೆ.

ಕೊರೊನಾದಿಂದ ಗುಣಮುಖನಾಗಿದ್ದ ಮಧ್ಯಪ್ರದೇಶದ ಒಂದೋರ್ ನಲ್ಲಿ 34 ವರ್ಷದ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದೆ. ಇದು ದೇಶದಲ್ಲೇ ಮೊದಲ ಗ್ರೀನ್ ಫಂಗಸ್ ಪ್ರಕರಣವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸೋಂಕಿತನನ್ನು ಮುಂಬೈಗೆ ಶಿಫ್ಟ್ ಮಾಡಲಾಗಿದೆ ಎಂದು ಅರಬಿಂದೋ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ನ ಡಾ.ರವಿ ದೋಸಿ ತಿಳಿಸಿದ್ದಾರೆ.

ವ್ಯಕ್ತಿಯ ಶ್ವಾಸಕೋಶ, ರಕ್ತ, ಸೈನಸ್ ನಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ