Breaking News

ಬೆಳಗಾವಿಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಯುವಕರ ಗುಂಪು….

Spread the love

ಬೆಳಗಾವಿ- ನಿನ್ನೆ ರಾತ್ರಿ ಹೊತ್ತು,ಅಟೋ ರಿಕ್ಷಾದಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ಯುವಕರಿಗೆ ಮನೆಗೆ ಹೋಗುವಂತೆ ಸೂಚಿಸಿದ ಪೋಲೀಸ್ ಪೇದೆಗಳ ಮೇಲೆ ಯುವಕರ ಗುಂಪೊಂದು ದಾಳಿ ಮಾಡಿದ ಘಟನೆ ಬೆಳಗಾವಿ ದರ್ಬಾರ್ ಗಲ್ಲಿಯಲ್ಲಿ ನಡೆದಿದೆ.

ಪೋಲೀಸರು ಬರುತ್ತಿದ್ದಂತೆಯೇ ರಿಕ್ಷಾದಲ್ಲಿದ್ದ ಕೆಲವು ಯುವಕರು ಮನೆಗೆ ಹೋಗಿದ್ದಾರೆ,ಆದ್ರೆ ಇಬ್ಬರು ಯುವಕರು ಪೋಲೀಸರ ಜೊತೆ ವಾದಕ್ಕಿಳಿದು,ಪೋಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇಬ್ಬರು ಯುವಕರು ಪೋಲೀಸರ ಜೊತೆ ವಾದ ಶುರು ಮಾಡುತ್ತಿದ್ದಂತೆಯೇ,ಅಲ್ಲಿ ಯುವಕರ ಗುಂಪು ಜಮಾವಣೆಯಾಗಿದೆ.ಎಲ್ಲರೂ ಸೇರಿ ಪೋಲೀಸರ ಮೇಲೆ ಅಟ್ಯಾಕ್ ಮಾಡಿದ್ದಾರೆಂದು ತಿಳಿದು ಬಂದಿದೆ.

ನಿನ್ನೆ ರಾತ್ರಿ ದರ್ಬಾರ ಗಲ್ಲಿಯಲ್ಲಿ ನಡೆದ ಘಟನಾವಳಿಯ ದೃಶ್ಯಗಳು ಸಿಸಿ ಟಿವ್ಹಿ ಕ್ಯಾಮರಾದಲ್ಲಿ ಸೆರೆಯಾಗಿವೆ.ಸಿಸಿಟಿವ್ಹಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಪೋಲೀಸರು ಜಾಲ ಬೀಸೀದ್ದಾರೆ.


Spread the love

About Laxminews 24x7

Check Also

ಸಾಲ ಮಾಡಿ ಬಜೆಟ್‌ ಮಂಡಿಸಿದ್ದು ಇದೇ ಮೊದಲ ಬಾರಿಯಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Spread the loveಕಳೆದ ಐವತ್ತು ವರ್ಷದಿಂದ ಸಾಲ ಮಾಡಿಯೇ ಬಜೆಟ್‌ ಮಂಡಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರಷ್ಟೇ ಸಾಲ ಮಾಡಿ ಬಜಟ್‌ ಮಂಡನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ