Breaking News

ತುಂಬಿದ ತುಂಗಾ; 21 ಕ್ರಸ್ಟ್ ಗೇಟ್ ಓಪನ್

Spread the love

ಶಿವಮೊಗ್ಗ : ಹಠಕ್ಕೆ ಬಿದ್ದಂತೆ ಮುಂಗಾರು ಸುರಿಯುತ್ತಿರುವ ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಏರಿಕೆ ಕಂಡಿದೆ. ಈಗಾಗಲೇ ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದ ಬಳಿಯ ತುಂಗಾ ಅಣೆಕಟ್ಟು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಹರಿಸಲಾಗುತ್ತಿದೆ.

ಅಣೆಕಟ್ಟಿನ 21 ಕ್ರಸ್ಟ್ ಗೇಟ್‍ಗಳ ಮೂಲಕ 7,300 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 2.85 ಕ್ಯೂಸೆಕ್ ನೀರು ಸಂಗ್ರಹ ಸಾಮಥ್ರ್ಯವನ್ನು ಹೊಂದಿದೆ. 1,500 ಕ್ಯೂಸೆಕ್ ನೀರು ನದಿಗೆ ಹಾಗೂ ಉಳಿದ 5,800 ಕ್ಯೂಸೆಕ್ ನೀರನ್ನು ಪವರ್ ಹೌಸ್‍ಗೆ ಬಿಡುಗಡೆ ಮಾಡಲಾಗಿದೆ.

ತುಂಗಾ ಮೇಲ್ದಂಡೆಯ ಇಂಜಿನಿಯರ್ ಹಾಗೂ ತುಂಗಾ ಅಣೆಕಟ್ಟೆಯ ಸಿಬ್ಬಂದಿ ಪೂಜೆ ಸಲ್ಲಿಸಿ ನದಿಗೆ ನೀರು ಬಿಟ್ಟಿದ್ದಾರೆ.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ