Breaking News

ವಾಹನಗಳ ಮಾಲೀಕರಿಗೆ ಗುಡ್ ನ್ಯೂಸ್: ಲಾಕ್ಡೌನ್ ಕಾರಣ ಉಚಿತ ಸರ್ವಿಸ್, ವಾರಂಟಿ ಅವಧಿ ವಿಸ್ತರಣೆ

Spread the love

ನವದೆಹಲಿ: ಕೊರೋನಾ ಸೋಂಕು ತಡೆಗೆ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಸೇರಿದಂತೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿರುವ ಕಾರಣ ವಾಹನಗಳ ವಾರಂಟಿ ಮತ್ತು ಉಚಿತ ಸೇವಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಉಚಿತ ಸೇವೆ ಮತ್ತು ವಾರಂಟಿ ಅವಧಿ ವಿಸ್ತರಣೆ ಮಾಡಲಾಗಿದ್ದು, ಮಾರುತಿ ಸುಜುಕಿ ಇಂಡಿಯಾ ಉಚಿತ ಸೇವೆ ಮತ್ತು ವಾರಂಟಿ ಅವಧಿಯನ್ನು ಜೂನ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ. 2021 ರ ಮಾರ್ಚ್ 15 ರಿಂದ ಮೇ 31 ರ ಅವಧಿಯೊಳಗೆ ಉಚಿತ ಸರ್ವಿಸ್, ವಾರಂಟಿ ಮುಗಿಯುವ ವಾಹನಗಳಿಗೆ ಮಾತ್ರ ಅನ್ವಯವಾಗುತ್ತದೆ.

ಟಾಟಾ ಮೋಟಾರ್ಸ್ ಏಪ್ರಿಲ್ 1 ರಿಂದ ಮೇ 31 ರೊಳಗೆ ವಾಹನಗಳ ಉಚಿತ ಸೇವೆ ಮತ್ತು ವಾರಂಟಿ ಅವಧಿ ಮುಗಿಯುವುದಿದ್ದರೆ ಜೂನ್ 30ರ ವರೆಗೆ ವಿಸ್ತರಿಸಿದೆ.

ಟೊಯೋಟಾ ಕಿರ್ಲೋಸ್ಕರ್ ಕೂಡ ಒಂದು ತಿಂಗಳವರೆಗೆ ವಾಹನಗಳ ವಾರಂಟಿ ಅವಧಿಯನ್ನು ವಿಸ್ತರಣೆ ಮಾಡಿದೆ. ರೆನಾಲ್ಟ್ ಉಚಿತ ಸರ್ವಿಸ್ ಮತ್ತು ವಾರಂಟಿ ಅವಧಿಯನ್ನು ಜುಲೈ 31 ರ ವರೆಗೆ ವಿಸ್ತರಿಸಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ