Breaking News

ಆರ್ಡರ್​ ಮಾಡಿದ್ದ ಮೌಥ್​​ವಾಶ್ ಬಂದಿದ್ದು ರೆಡ್​ಮಿ ನೋಟ್​ 10 ಫೋನ್​

Spread the love

ಮುಂಬೈ: ಆನ್​ಲೈನ್​ ಶಾಪಿಂಗ್​ ಅಮೇಜಾನ್​.ಕಮ್​ನಲ್ಲಿ ಕೊಲ್ಗೇಟ್​ ಮೌಥ್​​ವಾಶ್ ಆರ್ಡರ್​ ಮಾಡಿದ್ದ ಮುಂಬೈ ನಿವಾಸಿ, ಡೆಲಿವರಿ ಬಾಯ್​ ತಂದುಕೊಂಡ ಆರ್ಡರ್​ ಪ್ಯಾಕೇಜ್​ ತೆರೆದಾಗ ಅಚ್ಚರಿಯೇ ಕಾದಿತ್ತು. ಲೋಕೇಶ್​ ದಗಾ ಅವರು ತಾವು ಮೌಥ್​ವಾಶ್​ ಬುಕ್​ ಮಾಡಿದ್ದಾಗಿ ಅದಕ್ಕೆ ಸಂಬಂಧಿಸಿ ಫೋಟೋವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ನನ್ನ ಆರ್ಡರ್​ ಬದಲಾವಣೆ ಆಗಿರುವುದಾಗಿ ಸೆಕ್ಯುರಿಟಿ ಗಾರ್ಡ್​ ತಿಳಿಸಿದರು. ಪ್ಯಾಕೇಜ್​ ಚಿಕ್ಕದಾಗಿದ್ದರಿಂದ ನನಗೂ ಆಶ್ಚರ್ಯವಾಯಿತು. ತೆಗೆದು ನೋಡಿದಾಗ ಮೌಥ್​ವಾಶ್​ ಬದಲು ರೆಡ್​ಮಿ ನೋಟ್​ 10 ಫೋನ್​ ಇರುವುದು ಗೊತ್ತಾಯಿತು ಎಂದಿದ್ದಾರೆ.

ತಾನು ಮೌಥ್​ವಾಶ್ ಬುಕ್​ ಮಾಡಿದ್ದರಿಂದ ಬದಲಾವಣೆ ಆಗಿರುವ ಆರ್ಡರ್​ ಅನ್ನು ಮರುಬದಲಾವಣೆ ಮಾಡಲು ದಗಾ ಯತ್ನಿಸಿದ್ದಾರೆ. ಆದರೆ, ರಿಟರ್ನ್​ ಆಯಪ್​ ಮೂಲಕ​ ಸಾಧ್ಯವಾಗಲಿಲ್ಲ ಎಂದಿದ್ದಾರೆ.ಅಂದಹಾಗೆ ಫೋನ್​ ಬುಕ್​ ಮಾಡಿದ್ದು ಹೈದರಾಬಾದ್​ ಮೂಲಕ ವ್ಯಕ್ತಿ. ಆದರೆ, ಆತನಿಗೆ ಮೌಥ್​ವಾಶ್​ ಡೆಲಿವರಿ ಆಗಿದೆ. ಆದರೆ, ಮೌಥ್​ವಾಶ್​ ಬುಕ್​ ಮಾಡಿದ್ದ ದಗಾ ಅವರಿಗೆ ರೆಡ್​ಮಿ ನೋಟ್​ 10 ಫೋನ್​ ಬಂದಿದೆ. ಇದೀಗ ಏನು ಮಾಡುವುದು? ಹೇಗೆ ಬದಲಾವಣೆ ಮಾಡುವುದು ಎಂದು ತಿಳಿಯದೇ ಮರಳಿಸುವ ಪ್ರಯತ್ನ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ