Breaking News

ವಿಟ್ಲ: ಎರಡು ಬಟ್ಟೆ ಅಂಗಡಿಗಳ ಮಾಲಕರ ವಿರುದ್ಧ ಪ್ರಕರಣ ದಾಖಲು

Spread the love

ವಿಟ್ಲ: ಕೋವಿಡ್‌-19 ಸೋಂಕು ಹರಡದಂತೆ ಸರ್ಕಾರವು ರೂಪಿಸಿರುವ ಸೂಚನೆಗಳನ್ನು ಹಾಗೂ ದ.ಕ.ಜಿಲ್ಲಾ ದಂಡಾಧಿಕಾರಿಯವರ ಆದೇಶವನ್ನು ಪಾಲನೆ ಮಾಡದೇ ಉಲ್ಲಂಘಿಸಿದ ವಿಟ್ಲ ಕಸಬಾ ಗ್ರಾಮದ, ಪುತ್ತೂರು ರಸ್ತೆಯಲ್ಲಿರುವ ಕ್ಯೂಬಿ ಮತ್ತು ಫಿಟ್‌ ಫ್ಯಾಷನ್‌ ಬಟ್ಟೆ ಅಂಗಡಿಗಳ ಮಾಲಕರು ಮೇ 7ರಂದು ಬೆಳಗ್ಗೆ 7 ಗಂಟೆಗೆ ಬಾಗಿಲು ತೆರೆದು ಗ್ರಾಹಕರಿಗೆ ಬಟ್ಟೆಯನ್ನು ಮಾರಾಟ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ರವಿವಾರ ಪ್ರಕರಣ ದಾಖಲಾಗಿದೆ.

ಕ್ಯೂಬಿ ಬಟ್ಟೆ ಅಂಗಡಿಗೆ ಪಟ್ಟಣ ಪಂಚಾಯತ್ ಅಧಿಕಾರಿಗಳು ದಾಳಿ ಮಾಡಿ 3500 ರೂ ದಂಡ ವಿಧಿಸಿದ್ದರು.

ಎರಡೂ ಅಂಗಡಿಗಳ ವಿರುದ್ಧ ವಿಟ್ಲ ಪ.ಪಂ.ಮುಖ್ಯಾಧಿಕಾರಿ ಮಾಲಿನಿ ಮತ್ತು ಸಿಬಂದಿಗಳ ತಂಡವು ಪೊಲೀಸರೊಂದಿಗೆ ದಾಳಿ ಮಾಡಿತ್ತು. ಕ್ಯೂಬಿ ಬಟ್ಟೆ ಅಂಗಡಿ ಮಾಲಕ ಎದುರುಗಡೆ ರೋಲಿಂಗ್ ಶಟರ್ ಮುಚ್ಚಿ, ಹಿಂಬಾಗಿಲನ್ನು ತೆರೆದು ಗ್ರಾಹಕರನ್ನು ಒಳಗೆ ಬರಮಾಡಿಕೊಂಡು ವ್ಯಾಪಾರ ಮಾಡಿದ್ದರೆ, ಫಿಟ್ ಫ್ಯಾಶನ್ ಮಾಲಕ ಎದುರುಗಡೆ ರೋಲಿಂಗ್ ಶಟರನ್ನು ಅರ್ಧ ತೆರೆದು ವ್ಯಾಪಾರ ಮಾಡುತ್ತಿದ್ದರು.


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ