Breaking News

ಕೊರೊನಾ ನೆಗೆಟಿವ್ ವರದಿ ಇಲ್ಲ :ರಾಯ್ಪುರದಿಂದ ಬೆಂಗಳೂರಿಗರು ವಾಪಸ್

Spread the love

ಬೆಂಗಳೂರು, ಮೇ 08: ಕೋವಿಡ್ ನೆಗೆಟಿವ್ ವರದಿಯಿಲ್ಲದೆ ಬೆಂಗಳೂರಿನಿಂದ ರಾಯ್ಪುರಕ್ಕೆ ಬಂದಿಳಿಸಿದ್ದ 13 ಮಂದಿ ಪ್ರಯಾಣಿಕರನ್ನು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ.

ಪ್ರಯಾಣಿಕರು ಬೆಂಗಳೂರು, ಹೈದರಾಬಾದ್ ಮತ್ತು ನವದೆಹಲಿಯಿಂದ ಅವರು ರಾಯ್ಪುರಕ್ಕೆ ಆಗಮಿಸಿದ್ದರು. ಈ ಘಟನೆ ಬುಧವಾರ ಸಂಭವಿಸಿದ್ದು ಬೆಳಿಗ್ಗೆ 10.25 ಕ್ಕೆ ಬೆಂಗಳೂರಿನಿಂದ ಹೊರಟ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರು ಹತ್ತಿದ್ದರು ಅದರೆ ಕೋವಿಡ್ -19 ಪ್ರಕರಣಗಳ ಇತ್ತೀಚಿನ ಏರಿಕೆಯಿಂದಾಗಿ, ಛತ್ತೀಸ್‌ಗಢದ ಎಲ್ಲಾ ವಿಮಾನ ಪ್ರಯಾಣಿಕರಿಗೆ ಮೇ 4ರಿಂದ ಕೋವಿಡ್ ವರದಿಯನ್ನು ಕಡ್ಡಾಯಗೊಳಿಸಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಇಂಡಿಗೊ ಸಂಸ್ಥೆ ತನ್ನ ಪ್ರಯಾಣಿಕರನ್ನು ಒಳಗೊಂಡ ಈ ಘಟನೆಯ ಕುರಿತು ಯಾವುದೇ ವಿವರಗಳನ್ನು ನೀಡಲು ನಿರಾಕರಿಸಿತು. ಪ್ರಯಾಣಿಕರಿಗೆ ನಮ್ಮ ವಿಮಾನ ನಿಲ್ದಾಣಗಳಲ್ಲಿನ ಅವಶ್ಯಕತೆಗಳ ಕುರಿತು ನಾವು ಎಸ್.ಎಂ.ಎಸ್. ಎಚ್ಚರಿಕೆ ಸಂದೇಶಗಳನ್ನು ಕಳುಹಿಸುತ್ತೇವೆ ಎಂದು ವಕ್ತಾರರು ಹೇಳಿದರು.

ಡಿಜಿಸಿಎ ಮಹಾನಿರ್ದೇಶಕ ಅರುಣ್ ಕುಮಾರ್ ಹೇಳಿದಂತೆ ಆರೋಗ್ಯ ಸಚಿವಾಲಯ ನೇಮಕ ಮಾಡಿದ ವಿಮಾನ ನಿಲ್ದಾಣ ಆರೋಗ್ಯ ಅಧಿಕಾರಿ ಪ್ರಯಾಣಿಕರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.

ಈ ಮೊದಲು ರಾಯ್ಪುರ್ ವಿಮಾನ ನಿಲ್ದಾಣಯಾಣಿಕರಿಗೆ ಪರೀಕ್ಷೆಗಳನ್ನು ನಡೆಸುವ ಸೌಲಭ್ಯವನ್ನು ಹೊಂದಿತ್ತು, ಆದರೆ ಅದನ್ನು ನಿಲ್ಲಿಸಲಾಗಿದೆ ಎಂದು ಮತ್ತೊಂದು ಮೂಲ ತಿಳಿಸಿದೆ.

ಬೆಂಗಳೂರಿನ ಮೂವರು ಪ್ರಯಾಣಿಕರು ಮತ್ತು ಹೈದರಾಬಾದ್‌ನಲ್ಲಿ ಇಬ್ಬರು ಪ್ರಯಾಣಿಕರು ಪ್ರಮಾಣಪತ್ರವನ್ನು ಹೊಂದಿರಲಿಲ್ಲ. ಉಳಿದವರು ಕೂಡ ಪ್ರಮಾಣಪತ್ರಗಳನ್ನು ಕೊಂಡೊಯ್ಯಲಿಲ್ಲ. ಅವರೆಲ್ಲರನ್ನೂ ವಾಪಸ್ ಕಳುಹಿಸಲಾಯಿತು”. ಈ ವಾರ ಛತ್ತೀಸ್‌ಗಢದಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ವಿಮಾನ ನಿಲ್ದಾಣದ ಅಧಿಕಾರಿಗಳು ತುಂಬಾ ಕಟ್ಟುನಿಟ್ಟಾಗಿರುತ್ತಾರೆ ಮೂಲಗಳು ಹೇಳಿವೆ.


Spread the love

About Laxminews 24x7

Check Also

ವೈಯರ್‌ನಿಂದ ಕತ್ತು ಬಿಗಿದು ಲಿವ್ ಇನ್ ಗೆಳತಿಯ ಹತ್ಯೆ – ವಿವಾಹಿತ ಅರೆಸ್ಟ್‌

Spread the loveಬೆಂಗಳೂರು: ವೈಯರ್‌ನಿಂದ ಕತ್ತು ಬಿಗಿದು ಲಿವ್ ಇನ್‌ ಗೆಳತಿಯನ್ನು ವಿವಾಹಿತ ಕೊಲೆ ಮಾಡಿರುವ ಘಟನೆ ಬೆಂಗಳೂರಿನ  ವರ್ತೂರಿನಲ್ಲಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ