Breaking News

ಲಾಡ್ಜ್‌ನಲ್ಲಿ ಮಹಿಳೆ ಆತ್ಮಹತ್ಯೆ: ಜತೆಗಿದ್ದ ವ್ಯಕ್ತಿಯ ಸ್ಥಿತಿ ಗಂಭೀರ

Spread the love

ಗೋಣಿಕೊಪ್ಪಲು: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಲಾಡ್ಜ್ ಒಂದರಲ್ಲಿ ಶುಕ್ರವಾರ ಸಂಜೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜತೆಯಲ್ಲಿದ್ದ ತೋಲಂಡ ಸುಭಾಷ್ ಚಂಗಪ್ಪ ಎಂಬುವವರೂ ಆತ್ಮಹತ್ಯೆಗೆ ಯತ್ನಿಸಿ, ಬದುಕುಳಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.

ಸುಭಾಷ್ ಚಂಗಪ್ಪ ಲಾಡ್ಜ್‌ನಲ್ಲಿ ಕೊಠಡಿ ಪಡೆಯುವಾಗ ನಾಪೋಕ್ಲು ಸಮೀಪದ ಪೇರೂರು ಗ್ರಾಮದ ವಿಳಾಸ ನೀಡಿದ್ದಾರೆ. ಮೃತ ಮಹಿಳೆಯ ಕೊಠಡಿಯಲ್ಲಿ ಐಡಿ ಕಾರ್ಡ್ ಹಾಗೂ ಮೊಬೈಲ್ ದೊರೆತ್ತಿದ್ದು, ಇದರಲ್ಲಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಎಂದಿದ್ದು, ಹೆಸರು ಪ್ರಭಾವತಿ (60) ಎಂದಿದೆ. ಮೃತ ಮಹಿಳೆಯು ಸುಭಾಷ್ ಅವರ ತಾಯಿ ಇರಬಹುದು ಎಂದು ಪೊಲೀಸರು
ಶಂಕಿಸಿದ್ದಾರೆ.

ಕೊಠಡಿಯಲ್ಲಿ ಡೆತ್ ನೋಟ್ ದೊರೆತ್ತಿದ್ದು, ಈ ವಿಷಯವನ್ನು ಯಾರಿಗೂ ತಿಳಿಸಬೇಡಿ, ಪೊಲೀಸರೇ ಶವ ಸಂಸ್ಕಾರ ನೆರವೇರಿಸಲಿ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಸುಭಾಷ್ ಹಾಗೂ ಮಹಿಳೆ ಏ.7ರಂದು ಲಾಡ್ಜ್‌ನಲ್ಲಿ ಕೊಠಡಿ ಪಡೆದುಕೊಂಡಿದ್ದಾರೆ. ಏ.8ರ ಸಂಜೆವರೆಗೂ ರೂಮ್ ಬಾಯ್‌ಗೆ ಕಾಣಿಸಿಕೊಂಡಿದ್ದಾರೆ. ಆದರೆ ಶುಕ್ರವಾರ ಸಂಜೆ ರೂಮ್ ಬಳಿಗೆ ಹೋದ ರೂಮ್ ಬಾಯ್‌ಗೆ ಕೊಠಡಿ ಒಳಗಿನಿಂದ ವಿಷದ ವಾಸನೆ ಬಂದಿದೆ. ಬಾಗಿಲು ತೆರೆದು ನೋಡಿದಾಗ ಮಹಿಳೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸುಭಾಷ್ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿದೆ’ ಎಂದು ಮಾಹಿತಿ
ನೀಡಿದರು.

ಸ್ಥಳಕ್ಕೆ ಸಿಪಿಐ ಜಯರಾಮ್, ಸಬ್ ಇನ್‌ಸ್ಪೆಕ್ಟರ್‌ ಸುಬ್ಬಯ್ಯ ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲಿಸಿದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ