Breaking News

ಆನೆಯ ಬೆನ್ನ ಮೇಲೆ ಬೆತ್ತಲೆ ಮಲಗಿ ಫೋಟೋಶೂಟ್

Spread the love

ಮಾಡೆಲ್​ ಒಬ್ಬರು ಆನೆಯ ಬೆನ್ನ ಮೇಲೆ ಬೆತ್ತಲೆ ಮಲಗಿ ಫೋಟೋಶೂಟ್​ ಮಾಡಿಸಿಕೊಳ್ಳುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಅನೇಕರು ಮಾಡೆಲ್​ ಮಾಡಿದ ಅವಾಂತರ ಕಂಡು ಗರಂ ಆಗಿದ್ದಾರೆ. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯ ಕಾಮೆಂಟ್​ ಬರೆಯುವ ಮೂಲಕ ಮಾಡೆಲ್​ಗೆ ಬೈಗುಳಗಳ ಸುರಿಮಳೆ ಸುರಿಸಿದ್ದಾರೆ.

ರಷ್ಯಾ ಮೂಲದ ಮಾಡೆಲ್​ ಅಲೆಸ್ಯ ಕಾಫೆಲ್ನಿಕೋವಾ ಬೆತ್ತಲೆಯಾಗಿ ಫೋಟೋ ಕ್ಲಿಕ್ಕಿಸಲು ಆನೆ ಬೆನ್ನೇರಿದ್ದಾರೆ. ಸುಮಾತ್ರನ್​ ಎಂಬ ಅಳಿವಿನಂಚಿನಲ್ಲಿರುವ ಆನೆಯನ್ನು ಫೋಟೋಶೂಟ್​ಗಾಗಿ ಬಳಸಿಕೊಂಡಿದ್ದಾರೆ. ಮಾಡೆಲ್​ ಅಲೆಸ್ಯ ಇತ್ತೀಚೆಗೆ ಇಂಡೋನೆಷಿಯಾದಿಂದ ಬಾಲಿಗೆ ಹಾರಿದ್ದರು.ಅಲ್ಲಿ ಹೊಸದಾಗಿ ಫೋಟೋಶೂಟ್​ ಮಾಡಿಸಿಕೊಳ್ಳುವ ಪ್ಲಾನ್​ ಹಾಕಿಕೊಂಡಿದ್ದಾರೆ. ಅದರಂತೆ ವಿಭಿನ್ನವಾಗಿ ಫೋಟೋ ತೆಗೆಸಿಕೊಳ್ಳಬೇಕೆಂದು ಸುಮಾತ್ರನ್​ ಆನೆಯ ಜೊತೆಗೆ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.

ಅಲೆಸ್ಯ ಅವರ ಬೆತ್ತಲೆ ಫೋಟೋಶೂಟ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ವಿಡಿಯೋ ಕಂಡು ಭಾರೀ ವಿರೋಧ ವ್ಯಕ್ತಿ ಪಡಿಸಿದ್ದಾರೆ. ಅಲ್ಲದೆ, ಮಾಡೆಲ್​ ಹುಚ್ಚಾಟವನ್ನು ಕಂಡು ಸಿಟ್ಟಾಗಿದ್ದಾರೆ. ಇನ್ನು ಪ್ರಾಣಿದಯಾ ಸಂಘ ಮತ್ತು ಪರಿಸರ ಪ್ರೇಮಿಗಳು ಕೂಡ ಮಾಡೆಲ್​ ವರ್ತನೆಗೆ ಖಂಡನೆ ವ್ಯಕ್ತ ಪಡಿಸಿದ್ದಾರೆ. ಈ ವಿಚಾರ ಆಕೆಗೆ ತಿಳಿದಂತೆ ಇನ್​​ಸ್ಟಾಗ್ರಾಂನಿಂದ ವಿಡಿಯೋ ಡಿಲೀಟ್​ ಮಾಡಿದ್ದಾರೆ.

ಇದಾದ ಬಳಿಕ ಅಲೆಸ್ಯ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಆನೆಯೊಂದಕ್ಕೆ ಸ್ನಾನ ಮಾಡಿಸುತ್ತಿದ್ದಾರೆ. ಹಲವು ಟೀಕೆಗಳನ್ನು ಕೇಳಿದ ನಂತರ ಅಲೆಸ್ಯ ನಾನು ಪ್ರಾಣಿ ಪ್ರೇಮಿ, ಮೊದಲಿನಿಂದಲೂ ಪ್ರಾಣಿಗಳ ಸಂರಕ್ಷಣೆಗಾಗಿ ಸಾಕಷ್ಟು ದಾನ ಮಾಡಿದ್ದೇನೆ. ಆದರೆ ಯಾರಿಗೂ ಅದಾವುದು ಕಾಣಿಸುವುದಿಲ್ಲ ಎಂದಿದ್ದಾರೆ.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ