Breaking News
Home / ರಾಜಕೀಯ / ಪೆಟ್ರೋಲ್​ ದರ ಏರಿಕೆ ಕುರಿತು ʼಅಮುಲ್​ ಗರ್ಲ್ʼ​ಗೂ ಶುರುವಾಯ್ತು ಚಿಂತೆ.!

ಪೆಟ್ರೋಲ್​ ದರ ಏರಿಕೆ ಕುರಿತು ʼಅಮುಲ್​ ಗರ್ಲ್ʼ​ಗೂ ಶುರುವಾಯ್ತು ಚಿಂತೆ.!

Spread the love

ದೇಶದಲ್ಲಿ ಸದ್ಯ ಪೆಟ್ರೋಲ್​ ದರ ಏರಿಕೆಯದ್ದೇ ಸದ್ದು. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆಯಿಂದಾಗಿ ಶ್ರೀ ಸಾಮಾನ್ಯ ಕಂಗಾಲಾಗಿದ್ದಾನೆ. ಇತ್ತ ಪ್ರತಿಷ್ಟಿತ ಡೈರಿ ಬ್ರ್ಯಾಂಡ್​ ಅಮುಲ್​ ಕೂಡ ಪೆಟ್ರೋಲ್​ ಹಾಗೂ ಡೀಸೆಲ್​ ದರ ಏರಿಕೆ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣ್ತಿದೆ.

ಅಮುಲ್​ ಗರ್ಲ್​ನ್ನು ಬಳಸಿ ಮಾಡಲಾದ ಡೂಡಲ್​​ನಲ್ಲಿ ಪೆಟ್ರೋಲ್​ ದರ ಏರಿಕೆಯನ್ನ ವಿಮರ್ಶಿಸಲಾಗಿದೆ. ಇದರಲ್ಲಿ ಚೀಸ್​ನ್ನ ತಿನ್ನುತ್ತಾ ಕಾರಿಗೆ ಪೆಟ್ರೋಲ್​ ತುಂಬಿಸಿಕೊಳ್ತಿರುವ ಅಮುಲ್​ ಗರ್ಲ್​ ದುಃಖದಿಂದ ಮೀಟರ್​ ರೀಡಿಂಗ್​ ನೋಡುತ್ತಿದ್ದಾಳೆ. ಅಲ್ಲದೇ ದುಃಖಕರ ಏರಿಕೆ ಎಂದು ಬರೆಯಲಾಗಿದೆ.

ಅಮುಲ್​ ಟ್ವಿಟರ್​ನಲ್ಲಿ ಈ ಫೋಟೋವನ್ನ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ. ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೇ ಲೈಕ್ಸ್ ಹಾಗೂ ಕಮೆಂಟ್​ಗಳನ್ನ ಪಡೆದುಕೊಂಡಿದೆ.


Spread the love

About Laxminews 24x7

Check Also

ದೇಶನೂರ| ನಿರ್ಲಕ್ಷ್ಯಕ್ಕೊಳಗಾದ ಪ್ರೇಮದ ಸಂಕೇತ ‘ನಿರಂಜನಿ ಮಹಲ್‌’

Spread the love ನೇಸರಗಿ (ಬೆಳಗಾವಿ ಜಿಲ್ಲೆ): ಕಿತ್ತೂರು ರಾಣಿ ಚನ್ನಮ್ಮನ ಕಾಲದಲ್ಲಿ ಉಪರಾಜಧಾನಿಯಾಗಿ ಮೆರೆದ ಬೈಲಹೊಂಗಲ ತಾಲ್ಲೂಕಿನ ದೇಶನೂರ ಗ್ರಾಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ