Breaking News

ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ!

Spread the love

ಬೆಂಗಳೂರು: ತಾನು ಓದುತ್ತಿದ್ದ ಕಾಲೇಜಿನ ಲೆಕ್ಚರರ್​ರೊಬ್ಬರ ಮಗನ ಪ್ರೇಮಪಾಶಕ್ಕೆ ಸಿಕ್ಕ ವಿದ್ಯಾರ್ಥಿನಿ, ಇದೀಗ ನ್ಯಾಯಕ್ಕಾಗಿ ವಿದ್ಯಾರಣ್ಯಪುರ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

ಸಂತ್ರಸ್ತ ಯುವತಿ ಕೊಟ್ಟ ದೂರಿನ ಮೇರೆಗೆ ಆರೋಪಿ ಚಂದನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಚಂದನ್​ ತಾಯಿ ನಗರದ ಕಾಲೇಜೊಂದರ ಲೆಕ್ಚರರ್. ಆ ಯುವತಿಯೂ ಅದೇ ಕಾಲೇಜಿನ ವಿದ್ಯಾರ್ಥಿನಿ. ಲೆಕ್ಚರರ್​ನನ್ನು ನೋಡೋಕೆ ಎಂದು ವಿದ್ಯಾರ್ಥಿನಿ ಮನೆಗೆ ಬಂದ ವೇಳೆ ಚಂದನ್​ ಪರಿಚಯವಾಗಿತ್ತು. ಇವರಿಬ್ಬರ ನಡುವೆ ಸಲುಗೆ ಬೆಳೆದು ಪ್ರೀತಿಗೆ ತಿರುಗಿತ್ತು. ಮುಂದೆ ಏನೆಲ್ಲ ಅವಾಂತರ ಆಯ್ತು ಎಂಬುದುನ್ನು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ. ಅದರ ವಿವರ ಇಲ್ಲಿದೆ ನೋಡಿ.

2018ರಲ್ಲಿ ಸಂತ್ರಸ್ತ ಯುವತಿ ಕಾಲೇಜುನಲ್ಲಿ ಓದುತ್ತಿರುವಾಗ ಆರೋಪಿ ಚಂದನ್​ನ ಪರಿಚಯವಾಗಿತ್ತು. ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಈ ನಡುವೆ ಮದುವೆಯಾಗುವುದಾಗಿ ನಂಬಿಸಿದ್ದ ಚಂದನ್​, ಯುವತಿ ಜತೆ ಮೂವರು ವರ್ಷಗಳಿಂದ ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದಿದ್ದ. ಎರಡು ಬಾರಿ ಗರ್ಭಿಣಿಯಾದರೂ ಬಲವಂತವಾಗಿ ಅಬಾರ್ಷನ್​ ಮಾಡಿಸಿದ್ದ. ಅಲ್ಲದೆ ಮದುವೆಗಾಗಿ 5-6ರಿಂದ ಲಕ್ಷ ಹಣವನ್ನೂ ಪಡೆದಿದ್ದ. ಇದೀಗ ಮದುವೆ ಆಗಲ್ಲ ಎಂದು ವಂಚಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಚಂದನ್ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

ಕೆಪಿಎಸ್‌ಸಿ ನೇಮಕಾತಿ ಅಕ್ರಮ- ಎಸ್‌ಐಟಿ ರಚನೆಗೆ ಸುಪ್ರೀಂ ತಡೆ

Spread the loveನವದೆಹಲಿ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ  ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ