Breaking News

ಫೋಟೋ ಶೇರ್ ಮಾಡಿ ಮಗಳ ಹುಟ್ಟುಹಬ್ಬಕ್ಕೆ ನೆನಪಿರಲಿ ಪ್ರೇಮ್ ಪ್ರೀತಿಯ ವಿಶ್

Spread the love

ಸ್ಯಾಂಡಲ್ ವುಡ್ ನ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಪುತ್ರಿಗೆ ಹುಟ್ಟುಹಬ್ಬದ ಸಂಭ್ರಮ. ಮುದ್ದಿನ ಮುದ್ದಿನ ಮಗಳು ಅಮೃತಾ ಹುಟ್ಟುಹಬ್ಬಕ್ಕೆ ಪ್ರೇಮ್ ಮಗಳ ಜೊತೆಯಿರುವ ಫೋಟೋ ಹಂಚಿಕೊಂಡು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಪ್ರೇಮ್ ಮಗಳ ಜೊೆತೆ ಇರುವ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರೇಮ್ ಮಗಳ ಫೋಟೋ ಎಲ್ಲರ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳು ಸಹ ಶುಭಕೋರುತ್ತಿದ್ದಾರೆ. ನೆನಪಿರಲಿ ಪ್ರೇಮ್ ಗೆ ಇಷ್ಟು ದೊಡ್ಡ ಮಗಳಿದ್ದಾರಾ ಎಂದು ಅಚ್ಚರಿ ಪಡುತ್ತಿದ್ದಾರೆ. ಇನ್ನೂ ಯಂಗ್ ಆಗಿಯೇ ಇರುವ ಪ್ರೇಮ್ ಈಗಲೂ ಲವರ್ ಬಾಯ್ ಇಮೇಜ್ ನಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಆದರೆ ಮಗಳು ಇಷ್ಟು ಎತ್ತರಕ್ಕೆ ಬೆಳದಿದ್ದಾರೆ ಎಂದರೇ ನಂಬಲು ಸಾಧ್ಯವಾಗುತ್ತಿಲ್ಲ.

ಪ್ರೇಮ್ ಗೆ ಮಗಳೆಂದರೆ ಅತೀವ ಪ್ರೀತಿ. ಮಗಳ ಹುಟ್ಟುಹಬ್ಬಕ್ಕೆ ಪ್ರೇಮ್ ಪ್ರೀತಿಯ ವಿಶ್ ಮಾಡಿದ್ದಾರೆ. ‘ನಕ್ಷತ್ರಗಳು ನಾಚುವ ಹಾಗೆ ಸದಾ ನಗುತ್ತಿರು. ಹುಟ್ಟುಹಬ್ಬದ ಶುಭಾಶಯಗಳು ಮಗಳೆ. ಲವ್ ಯೂ’ ಎಂದು ಬರೆದುಕೊಂಡಿದ್ದಾರೆ. ಪ್ರೇಮ್ ಮಗಳ ಫೋಟೋ ಶೇರ್ ಮಾಡುತ್ತಿದಂತೆ ನೆಟ್ಟಿಗರು, ಸರ್ ನಿಮ್ಮ ಮಗಳು ಇಷ್ಟು ದೊಡ್ಡವರಾ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಅಂದಹಾಗೆ ಅಮೃತಾ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಓದುತ್ತಿದ್ದಾರೆ. ಇತ್ತೀಚಿಗಷ್ಟೆ ಅಮೃತಾ ಟ್ರಡಿಷನಲ್ ಫೋಟೋಶೂಟ್ ಮಾಡಿಸುವ ಮೂಲಕ ಎಲ್ಲರ ಗಮನ ಸೆಳೆಸಿದ್ದರು. ಮಗಳು ಸೀರೆ ಧರಿಸಿ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋವನ್ನು ಶೇರ್ ಮಾಡಿ ಪ್ರೇಮ್, ‘ಮಗಳೆಂದರೆ ದೇವತೆ. ದೇವತೆಯನ್ನು ಪಡೆಯುವ ಅದೃಷ್ಟ ಎಲ್ಲಾ ತಂದೆಯರಿಗೂ ಸಿಗುವುದಿಲ್ಲ. ಅಭಿನಂದನೆಗಳು ನನ್ನ ಅದೃಷ್ಟ ದೇವತೆಗೆ’ ಎಂದು ಮಗಳ ಬಗ್ಗೆ ಪ್ರೀತಿಯಿಂದ ಬರೆದುಕೊಂಡಿದ್ದರು


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ