Breaking News

ಬಸ್ ಪಾಸ್ ಇದ್ರು ನಡೆದುಕೊಂಡು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು..!

Spread the love

ಗದಗ (ಜ. 24): ಕೊರೋನಾ ಹಾವಳಿಯಿಂದ ಆನ್ ಲೈನ್ ಶಿಕ್ಷಣವನ್ನು ಮನೆಯಲ್ಲಿಯೇ ಪಡೆದು, ಈಗ ತಾನೇ ಕಾಲೇಜು ಕಡೇ ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ. ಒಂದು ಕಡೇ ಕೊರೊನಾ ಆತಂಕ ಇನ್ನೊಂದೆಡೆ ಸಮರ್ಪಕ  ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಇರದಿದಕ್ಕೆ ವಿದ್ಯಾರ್ಥಿಗಳು ಪಡಬಾರದ ಕಷ್ಟವನ್ನು ಅನುಭವಿಸುತ್ತಿದ್ದಾರೆ. ತಾಲೂಕಿನ ಹಾತಲಗೇರಿ ಗ್ರಾಮದ ವಿದ್ಯಾರ್ಥಿಗಳು ನಿತ್ಯ ಗದಗ ನಗರಕ್ಕೆ ನಡೆದುಕೊಂಡು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾತಲಗೇರಿ ಗ್ರಾಮದಲ್ಲಿ ಸುಮಾರು  40 ರಿಂದ‌ 50 ವಿದ್ಯಾರ್ಥಿಗಳು, ಪಿಯುಸಿ, ಐಟಿಐ, ಸೇರಿದಂತೆ ಪದವಿ ಶಿಕ್ಷಣ ಪಡೆಯಲು ಗದಗ ನಗರಕ್ಕೆ ಆಗಮಿಸುತ್ತಾರೆ. ಆದ್ರೆ ಮುಂಜಾನೆ ಗದಗ ಲಕ್ಕುಂಡಿ ಮಾರ್ಗವಾಗಿ ಸಂಚಾರ ಮಾಡುವ ಒಂದೇ ಒಂದು ಬಸ್ ಇರೋದರಿಂದ ಅದು ಸಂಪೂರ್ಣವಾಗಿ ಭರ್ತಿಯಾಗಿ ಬರ್ತಾಯಿದೆ. ಹಾತಲಗೇರಿ ವಿದ್ಯಾರ್ಥಿಗಳು ಬಸ್ ನಲ್ಲಿ ಹತ್ತಲು ಸ್ಥಳಾವಕಾಶ ಇರದಿದಕ್ಕೆ ನಡೆದುಕೊಂಡು ಕಾಲೇಜಿಗೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ದುಡ್ಡು ಇದ್ದವರು ಟಂಟಂ ಗಳ ಮೂಲಕ  ಕಾಲೇಜಿಗೆ ಬಂದ್ರೆ, ಬಡ ವಿದ್ಯಾರ್ಥಿಗಳು ನಡೆದುಕೊಂಡು ಕಾಲೇಜಿಗೆ ಹೋಗುವಂತಹ ಸ್ಥಿತಿಯಿದೆ.‌ ಕೂಡಲೇ ನಮಗೆ ಬಸ್ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.


Spread the love

About Laxminews 24x7

Check Also

ಹೃದಯಾಘಾತದಿಂದ ಸಾವನ್ನಪ್ಪಿದ ಡಾ.ಸಂದೀಪ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಬ್ಬಾಕ ಸ್ವಾಮಿ

Spread the loveಶಿವಮೊಗ್ಗ/ತುಮಕೂರು: ಕಳೆದ ಒಂದೇ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ 19 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಈಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ