Breaking News

ಇದೇನಾದರೂ ಜಾರಿ ಆಯ್ತು ಅಂದ್ರೆ ನೀವು ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡೋಕೂ ಯೋಚ್ನೆ ಮಾಡ್ತೀರಿ!

Spread the love

ನವದೆಹಲಿ: ಕಾನೂನು ಹೇಗೇ ಇದ್ದರೂ, ದಂಡ ಎಷ್ಟೇ ಇದ್ದರೂ ವಾಹನ ಸವಾರರು ಒಮ್ಮೊಮ್ಮೆ ಸರಾಗವಾಗಿ ಸಂಚಾರ ನಿಯಮ ಉಲ್ಲಂಘಿಸಿ ಬಿಡುತ್ತಾರೆ. ಆದರೆ ಇದೀಗ ಟ್ರಾಫಿಕ್​ ರೂಲ್ಸ್​ ಪಾಲನೆ ಮಾಡಿಸುವ ನಿಟ್ಟಿನಲ್ಲಿ ಹೀಗೊಂದು ಚಿಂತನೆ ನಡೆದಿದ್ದು, ಒಂದು ವೇಳೆ ಇದೇನಾದರೂ ಜಾರಿಯಾದರೆ ಬಹಳಷ್ಟು ಮಂದಿ ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡುವುದು ಕಡಿಮೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್​ಡಿಎಐ) ನೇಮಿಸಿರುವ ಸಮಿತಿಯೊಂದು ಇಂಥದ್ದೊಂದು ಪ್ರಸ್ತಾವ ಇರಿಸಿದೆ. ಟ್ರಾಫಿಕ್​ ರೂಲ್ಸ್ ಉಲ್ಲಂಘಿಸುವುದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಇದು ಪ್ರತ್ಯೇಕ ವಿಮಾ ಪ್ರೀಮಿಯಂ ಅಳವಡಿಸುವ ಬಗ್ಗೆ ಪ್ರಸ್ತಾವನೆ ಇರಿಸಿದೆ. ಅದಕ್ಕಾಗಿ ಟ್ರಾಫಿಕ್​ ಉಲ್ಲಂಘನೆ ಪ್ರಕರಣಗಳನ್ನು ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಜತೆ ಲಿಂಕ್ ಮಾಡುವ ಸಲಹೆಯನ್ನು ನೀಡಿದೆ.

ಇದಕ್ಕೆ ಟ್ರಾಫಿಕ್​ ವಯೊಲೇಷನ್​ ಪ್ರೀಮಿಯಂ (ಟಿವಿಪಿ) ಎಂದು ಹೆಸರಿಡಲಾಗಿದ್ದು, ಈಗಾಗಲೇ ಇರುವ ಓನ್ ಡ್ಯಾಮೇಜ್​ ಇನ್ಶೂರೆನ್ಸ್​, ಥರ್ಡ್​ ಪಾರ್ಟಿ ಇನ್ಶೂರೆನ್ಸ್, ಅಡಿಷನಲ್ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಹಾಗೂ ಕಂಪಲ್ಸರಿ ಪರ್ಸನಲ್​ ಆಯಕ್ಸಿಡೆಂಟ್ ಪ್ರೀಮಿಯಂ ಜತೆ ಇದನ್ನೂ ಸೇರಿಸುವಂತೆ ಪ್ರಸ್ತಾವನೆ ಇಡಲಾಗಿದೆ.

ಈ ಟಿವಿಪಿ ಹೊಸ ವಾಹನಗಳಿಗೆ ಅನ್ವಯಿಸುವುದಿಲ್ಲ. ಆದರೆ ಆ ಬಳಿಕದ ನವೀಕರಣ ವೇಳೆ ಅನ್ವಯಿಸುತ್ತದೆ. ಅಂದರೆ ಮುಂದೆ ಕಳೆದ ಎರಡು ವರ್ಷಗಳಲ್ಲಿ ಎಷ್ಟು ಸಲ ಟ್ರಾಫಿಕ್​ ರೂಲ್ಸ್ ಉಲ್ಲಂಘಿಸಲಾಗಿದೆ ಎಂಬುದರ ಮೇಲೆ ಇದರ ಪ್ರೀಮಿಯಂ ನಿರ್ಧರಿಸಲಾಗುತ್ತದೆ. ಅರ್ಥಾತ್ ಕಳೆದ ಎರಡು ವರ್ಷಗಳಲ್ಲಿ ಹೆಚ್ಚು ಸಲ ಸಂಚಾರ ನಿಯಮ ಉಲ್ಲಂಘಿಸಿದ್ದರೆ ಹೆಚ್ಚು ಟಿವಿಪಿ ವಿಧಿಸಲಾಗುತ್ತದೆ.

ಈ ಮೂಲಕ ಇನ್ಶೂರೆನ್ಸ್ ಇನ್​ಫಾರ್ಮೇಷನ್​ ಬ್ಯೂರೋ ಆಫ್ ಇಂಡಿಯಾ(ಐಐಬಿ) ದೇಶದ ಎಲ್ಲ ಸಂಚಾರ ಇಲಾಖೆ ಹಾಗೂ ನ್ಯಾಷನಲ್ ಇನ್​ಫಾರ್ಮ್ಯಾಟಿಕ್ಸ್ ಸೆಂಟರ್​ ಜತೆ ಸಂಪರ್ಕದಲ್ಲಿದ್ದು ದೇಶದಲ್ಲಿನ ಒಟ್ಟಾರೆ ಸಂಚಾರ ನಿಯಮ ಉಲ್ಲಂಘನೆ ಅಂಕಿ-ಅಂಶಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಆ ಮೂಲಕ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರಿಗೆ ದಂಡ ಹಾಕುವ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಭವಿಷ್ಯದಲ್ಲಿ ವಾಹನ ಮಾಲೀಕರು ಜನರಲ್ ಇನ್ಶೂರೆನ್ಸ್​ ಕ್ಲೇಮ್​ ಮಾಡಿಕೊಳ್ಳುವಾಗ ಈ ಟಿವಿಪಿಯನ್ನೂ ಪರಿಗಣಿಸಲಾಗುವುದು. ಇಂಥದ್ದೊಂದು ಕರಡು ಸದ್ಯ ಸಲ್ಲಿಕೆಯಾಗಿದ್ದು, ಪರಿಶೀಲನೆಯಲ್ಲಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ