Breaking News

ಈ ಏಳು ಜನರು ಸಚಿವರಾಗುವುದು ಬಹುತೇಕ ಖಚಿತ ಆಗಿದೆ.

Spread the love

ಬೆಂಗಳೂರು; ಬಹುನಿರೀಕ್ಷೆಯ ಸಚಿವ ಸಂಪುಟ ವಿಸ್ತರಣೆ ಆಗಿದ್ದು, ನಾಳೆ ಮಧ್ಯಾಹ್ನ 3.55ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಏಳು ಮಂದಿ ಶಾಸಕರು ಸಿಎಂ ಬಿಎಸ್​ ಯಡಿಯೂರಪ್ಪ ಅವರ ಸಚಿವ ಸಂಪುಟ ಸೇರಲಿದ್ದಾರೆ. ಆದರೆ ಯಾರೆಲ್ಲಾ ಸಂಪುಟ ಸೇರಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕರು ಸೇರಿದಂತೆ ಬಿಜೆಪಿ ನಾಯಕರಲ್ಲಿಯೂ ಮೂಡಿದೆ. ಕಾರಣ ನೂತನ ಸಚಿವರ ಪಟ್ಟಿಯ ಗೌಪತ್ಯೆಯನ್ನು ಸಿಎಂ ಬಿಎಸ್​ ಯಡಿಯೂರಪ್ಪ ಅವರು ಕಾಯ್ದುಕೊಂಡಿದ್ದಾರೆ.

ಅಲ್ಲದೇ , ನೂತನ ಸಚಿವರಿಗೆ ತಾವೇ ಖುದ್ದು ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸುವುದಾಗಿ ತಿಳಿಸಿದ್ದಾರೆ. ಈ ನಡುವೆ ಮಾತನಾಡಿರುವ ಅವರು, ನಾಳೆ ಸಚಿವರಾಗಿ 7ರಿಂದ 8 ಶಾಸಕರ ಪದಗ್ರಹಣ  ಮಾಡಲಿದ್ದಾರೆ. ಅವರಿಗೆಲ್ಲಾ ನಾಳೆ ರಾಜಭವನಕ್ಕೆ ಬರಲು ಹೇಳಿದ್ದೇನೆ. ನಾಳೆ 3.50ಕ್ಕೆ ರಾಜಭವನದ ಗಾಜಿನ ಅರಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ನಡೆಯಲಿದೆ ಎಂದು ತಿಳಿಸಿದ್ದಾರೆ.

ಅದರಂತೆ ಮಾಹಿತಿ ಪ್ರಕಾರ ಈ ಏಳು ಜನರು ಸಚಿವರಾಗುವುದು ಬಹುತೇಕ ಖಚಿತ ಆಗಿದೆ.

1. ಉಮೇಶ್ ಕತ್ತಿ
2. ಮುರುಗೇಶ್ ನಿರಾಣಿ
3. ಅರವಿಂದ ಲಿಂಬಾವಳಿ

4. ಎಸ್ ಅಂಗಾರ
5. ಆರ್ ಶಂಕರ್
6. ಎಂಟಿಬಿ ನಾಗರಾಜ್
7. ಸಿಪಿ ಯೋಗೇಶ್ವರ್


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ