Breaking News
Home / ರಾಜ್ಯ / ಬಾಲಿವುಡ್ ನಟಿ ಪ್ರೀತಿ ಜಿಂಟಾ ಕುಟುಂಬದ ಸದಸ್ಯರೆಲ್ಲರಿಗೂ ಕೊರೊನಾ ಪಾಸಿಟಿವ್

ಬಾಲಿವುಡ್ ನಟಿ ಪ್ರೀತಿ ಜಿಂಟಾ ಕುಟುಂಬದ ಸದಸ್ಯರೆಲ್ಲರಿಗೂ ಕೊರೊನಾ ಪಾಸಿಟಿವ್

Spread the love

ಮುಂಬೈ, ಜ.11- ಬಾಲಿವುಡ್ ನಟಿ ಮತ್ತು ಐಪಿಎಲ್ ಕಿಂಗ್ಸ್ 11 ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಕುಟುಂಬದ ಸದಸ್ಯರೆಲ್ಲರಿಗೂ ಕೊರೊನಾ ಸೋಂಕು ಪಾಸಿಟೀವ್ ಎಂದು ತಿಳಿದು ಬಂದಿದೆ. ಜಿಂಟಾ ಅವರ ತಾಯಿ, ಸಹೋದರ, ಅತ್ತಿಗೆ ಅವರ ಮಕ್ಕಳು ಮತ್ತು ಚಿಕ್ಕಪ್ಪ ಅವರು ಕೋವಿಡ್-19 ಪರೀಕ್ಷೆಗೊಳಗಾಗಿದ್ದು, ಪ್ರಯೋಗಾಲದ ವರದಿ ಪ್ರಕಾರ ಎಲ್ಲರಿಗೂ ಕೊರೊನಾ ಸೋಂಕು ತಗುಲಿದೆ.

ಪ್ರಸ್ತುತ ಅಮೆರಿಕದಲ್ಲಿರುವ ಪ್ರೀತಿ ಜಿಂಟಾ ಇನ್‍ಸ್ಟಾ ಗ್ರಾಂನಲ್ಲಿ ಕುಟುಂಬದ ಎಲ್ಲ ಸದಸ್ಯರಿಗೂ ಕೋವಿಡ್-19 ಸೋಂಕು ತಗುಲಿರುವುದು ತೀವ್ರ ಕಳವಳ ತಂದೊಡ್ಡಿ, ನನ್ನ ನಿದ್ರೆಗೆಡಿಸಿತ್ತು. ಆದರೆ ಇತ್ತೀಚಿನ ವೈದ್ಯಕೀಯ ವರದಿ ಪ್ರಕಾರ ಎಲ್ಲರಿಗೂ ಸೂಕ್ತ ಚಿಕಿತ್ಸೆ ದೊರೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವುದು ನನಗೆ ನೆಮ್ಮದಿ ತಂದಿದೆ ಎಂದಿದ್ದಾರೆ.ಮೂರು ವಾರಗಳ ಹಿಂದೆ ನನ್ನ ಚಿಕ್ಕಪ್ಪ, ತಾಯಿ, ಸಹೋದರ ಮತ್ತು ಅವರ ಕುಟುಂಬದ ಸದಸ್ಯರಿಗೆ ಕೋವಿಡ್-19 ಸೋಂಕು ತಗಲಿದೆ ಎಂದು ತಿಳಿದು ಬಂದಿತ್ತು. ಐಸಿಯು, ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯಗಳನ್ನು ನೋಡಿ ಗಾಬರಿಗೊಂಡಿದ್ದೆ. ನಾನು ಅಮೆರಿಕದಲ್ಲಿರುವುದರಿಂದ ಏನು ಮಾಡುವ ಸಾಧ್ಯವಾಗಲಿಲ್ಲ. ದೇವರ ದಯೆಯಿಂದ ಇಂದು ಚೇತರಿಸಿಕೊಳ್ಳುತ್ತಿರುವ ಸುದ್ದಿ ತಿಳಿದು ಬಂದಿದೆ ಎಂದು ಹೇಳಿಕೊಂಡಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ