Breaking News
Home / Uncategorized / ಯುವಕನೋರ್ವ ಹಲ್ಲುಜ್ಜುತ್ತಾ ಟೂಥ್ ಬ್ರಶ್ ನುಂಗಿರುವ ವಿಚಿತ್ರ ಘಟನೆ

ಯುವಕನೋರ್ವ ಹಲ್ಲುಜ್ಜುತ್ತಾ ಟೂಥ್ ಬ್ರಶ್ ನುಂಗಿರುವ ವಿಚಿತ್ರ ಘಟನೆ

Spread the love

ಮುಂಬೈ: ಯುವಕನೋರ್ವ ಹಲ್ಲುಜ್ಜುತ್ತಾ ಟೂಥ್ ಬ್ರಶ್ ನುಂಗಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.

ವಿಜಯ್ ಜನಾರ್ಧನ್ ಬ್ರಶ್ ನುಂಗಿದ ಯುವಕ. ಡಿಸೆಂಬರ್ 26ರಂದು ಬೆಳಗ್ಗೆ ಹಲ್ಲುಜ್ಜುವಾಗ ಬ್ರಶ್ ನುಂಗಿದ್ದಾನೆ. ಕೆಲ ಸಮಯದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಾಗ ವಿಜಯ್ ನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಎಕ್ಸ್ ರೇ ಮಾಡಿದಾಗ ಅವರಿಗೂ ಗೊತ್ತಾಗಿಲ್ಲ. ಸಿಟಿ ಸ್ಕ್ಯಾನ್ ಮಾಡಿದಾಗ ಟೂಥ್‍ಬ್ರಶ್ ಕಂಡಿದ್ದು, ತಡಮಾಡದೇ ಶಸ್ತ್ರಚಿಕಿತ್ಸೆ ನಡೆಸಿ ಯುವಕನ ಜೀವ ಉಳಿಸಿದ್ದಾರೆ.

ಸರ್ಜರಿ ಬಳಿಕ ವಿಜಯ್ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ನಿಗಾದಲ್ಲಿದ್ದಾನೆ. ಡಾ.ಜುನೈದ್ ಶೇಖ್, ಅವಿನಾಶ್ ಘಡಗೆ, ಡಾ.ಓಮರ್ ಖಾನ್, ಡಾ.ಸಂದೀಪ್, ಡಾ.ಸುಕನ್ಯ, ಡಾ, ಗೌರವ್, ಡಾ.ಅನಿಕೇತ್ ಮತ್ತು ಡಾ. ವಿಶಾಖಾ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ.


Spread the love

About Laxminews 24x7

Check Also

ನಿನ್ನ ಮಗನಿಂದ ಇಂಥ ಕಪ್ಪು ಚುಕ್ಕೆ ಬಂತು; ರೇವಣ್ಣ ಮೇಲೆ ಮುಗಿಬಿದ್ದ ಎಚ್‌ಡಿಡಿ, ಎಚ್‌ಡಿಕೆ

Spread the loveಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ