Breaking News

ಲಂಡನ್ ಹಾಗೂ ಆಗ್ನೇಯ ಇಂಗ್ಲೆಂಡ್‍ನಲ್ಲಿ ಕಠಿಣ ಲಾಕ್‍ಡೌನ್

Spread the love

ಕೊರೊನಾ ವೈರಸ್ ರೂಪಾಂತರದಿಂದ ಇಂಗ್ಲೆಂಡ್ ತತ್ತರಿಸಿ ಹೋಗಿದ್ದು, ಲಂಡನ್ ಹಾಗೂ ಆಗ್ನೇಯ ಇಂಗ್ಲೆಂಡ್‍ನಲ್ಲಿ ಕಠಿಣ ಲಾಕ್‍ಡೌನ್ ವಿಧಿಸಲಾಗಿದೆ. ಸುದ್ದಿಗೋಷ್ಠಿ ನಡೆಸಿ ಬೋರಿಸ್ ಜಾನ್ಸಸ್ ಕಠಿಣವಾದ ‘ಟಯರ್ 4’ ಲಾಕ್‍ಡೌನ್ ವಿಧಿಸಿರುವ ಬಗ್ಗೆ ಮಾಹಿತಿ ನಿಡಿದ್ದಾರೆ. ಸೋಮವಾರ ಕೊರೊನಾ ರೂಪಾಂತರದ ಬಗ್ಗೆ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ಅಲ್ಲದೆ ಮುಖ್ಯ ವೈದ್ಯಕೀಯ ಅಧಿಕಾರಿ ಪ್ರೊ.ಕ್ರಿಸ್ ವಿಟ್ಟಿ ಈ ಕುರಿತು ಮಾಹಿತಿ ನೀಡಿದ್ದು, ರೂಪಾಂತರಗೊಂಡಿರುವ ವೈರಸ್ ಬಹುಬೇಗ ಹರಡುತ್ತದೆ ಎಂದು ಎಚ್ಚರಿಸಿದ್ದಾರೆ.ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ಎಚ್ಚರಿಕೆ ನೀಡಿದ್ದು, ವೈರಸ್ ಕುರಿತು ತಿಳಿಯಲು ಲಭ್ಯವಿರುವ ಅಂಕಿಗಳನ್ನು ಆಧರಿಸಿ ಹೆಚ್ಚು ತಿಳಿಯಲಾಗುತ್ತಿದೆ. ಅಲ್ಲದೆ ಹೊಸ ವೈರಸ್ ಒತ್ತಡದಿಂದ ಹೆಚ್ಚು ಸಾವು ಸಂಭವಿಸುತ್ತದೆ ಅಥವಾ ಲಸಿಕೆ ಹಾಗೂ ಚಿಕಿತ್ಸೆಗೆ ಸ್ಪಂದಿಸಲಿದೆ ಎಂಬುದನ್ನು ತಿಳಿಸಲು ಯಾವುದೇ ಪುರಾವೆಗಳಿಲ್ಲ. ಇದನ್ನು ಪತ್ತೆಹಚ್ಚಲು ತುರ್ತು ಕೆಲಸ ನಡೆಯುತ್ತಿದೆ ಎಂದು ಕ್ರಿಸ್ ವಿಟ್ಟಿ ಮಾಹಿತಿ ನೀಡಿದ್ದಾರೆ.

ಈ ಕುರಿತು ತಿಳಿಯಲು ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದ್ದು, ತುರ್ತಾಗಿ ಮಾಡಬೇಕಿರುವುದು ಸವಾಲಿನ ಕೆಲಸವಾಗಿದೆ. ದೇಶಾದ್ಯಂತ ಲಾಕ್‍ಡೌನ್ ಹೇರಲಾಗಿಲ್ಲ. ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶಗಳಲ್ಲಿ ಕಠಿಣ ಲಾಕ್‍ಡೌನ್ ಹೇರಿದ್ದರೆ ಕಡಿಮೆ ಸೋಂಕಿತರು ಇರುವ ಪ್ರದೇಶಗಳಲ್ಲಿ ಕೆಲ ವಿನಾಯಿತಿ ನೀಡಲಾಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ