ಬೆಂಗಳೂರು (ಡಿ. 16): ಕಾಲೇಜಿಗೆ ದಾಖಲಾತಿ ಮಾಡಿಸುತ್ತೇನೆಂದು ತನ್ನ ರೂಮ್ಗೆ ಕರೆಸಿಕೊಂಡ ಸ್ನೇಹಿತನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಹೊರರಾಜ್ಯದಿಂದ ಇಲ್ಲಿಗೆ ಆಗಮಿಸಿದ್ದ ಯುವತಿಯನ್ನು ಆಕೆಯ ಸಹಪಾಠಿ ಯುವಕನೇ ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ. ಲಾಕ್ಡೌನ್ ಹಿನ್ನಲೆ ಒಂದು ಕಂತಿನ ಫೀಜ್ ಅನ್ನುಬಾಕಿ ಉಳಿಸಿಕೊಂಡಿದ್ದು, ಅದನ್ನು ಕಟ್ಟಲು ಆಕೆ ನಗರಕ್ಕೆ ಆಗಮಿಸಿದ್ದಳು. ಈ ವೇಳೆ ಆರೋಪಿ ಈ ಕೃತ್ಯ ಎಸಗಿದ್ದಾನೆ. ಬಳಿಕ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ನಂಬಿಸುವ ಪ್ರಯತ್ನ ನಡೆಸಿದ್ದು, ವೈದ್ಯರ ತನಿಖೆಯಲ್ಲಿ ಅಸಲಿ ವಿಷಯ ಬಯಲಾಗಿದೆ.
ನಗರದ ಖಾಸಗಿ ಕಾಲೇಜಿನಲ್ಲಿ ದಾಖಲಾತಿ ಪಡೆದಿದ್ದ ಯುವತಿ ಲಾಕ್ಡೌನ್ ಹಿನ್ನಲೆ ಒಂದು ಕಂತಿನ ಕಾಲೇಜ್ ಫೀಸ್ ಬಾಕಿ ಉಳಿಸಿಕೊಂಡಿದ್ದು, ಅದನ್ನು ಕಟ್ಟಲು ನಗರಕ್ಕೆ ಆಗಮಿಸಿದ್ದಳು. ಈ ವೇಳೆ ಸಹಾಯಮಾಡುವುದಾಗಿ ಆಕೆಯನ್ನು ಆರೋಪಿ ಸ್ನೇಹಿತ ರೂಮ್ಗೆ ಕರೆಸಿಕೊಂಡಿದ್ದಾನೆ.ನಂತರ ರೂಂಗೆ ಬಂದ ಸ್ನೇಹಿತೆಯನ್ನು ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾನೆ.
ಬಳಿಕ ಅದೇ ಬಿಲ್ಡಿಂಗ್ ನ ಕೆಳ ಮಹಡಿಗೆ ಬಂದ ಆರೋಪಿ ಸ್ನೇಹಿತರಿಗೆ ತನ್ನ ಸ್ನೇಹಿತೆ ಪ್ರಜ್ಞೆ ಕಳೆದು ಕೊಂಡು ಬಿದ್ದಿದ್ದಾಳೆ ಎಂದಿದ್ದಾನೆ. ಈ ವೇಳೆ ಆರೋಪಿ ಸ್ನೇಹಿತರು ಯುವತಿಯನ್ನು ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಯುವತಿ ಸಾವನ್ನಪ್ಪಿದ್ದು, ಈ ಕುರಿತು ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.