Breaking News

ಸೆಕ್ಸ್ ಸಿನಿಮಾಗಳನ್ನು ನೋಡಿ ಗೆಳೆಯನ ತಾಯಿಯನ್ನ ಅತ್ಯಾಚಾರಗೈದಿರುವ ಭಯಾನಕ, ಅಮಾನವೀಯ ಘಟನೆ

Spread the love

ಜೈಪುರ: ಸೆಕ್ಸ್ ಫಿಲಂ ನೋಡಿ ಗೆಳೆಯನ ತಾಯಿಯನ್ನ ಅತ್ಯಾಚಾರಗೈದಿರುವ ಭಯಾನಕ, ಅಮಾನವೀಯ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಹಜಹಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.21 ವರ್ಷದ ವಿಕಾಸ್ ಅಲಿಯಾಸ್ ನೇವಲಾ ಕಾಮುಕ ಯುವಕ. ಆನ್‍ಲೈನ್ ಸೆಕ್ಸ್ ಸಿನಿಮಾಗಳನ್ನು ನೋಡಿದ ವಿಕಾಸ್, ಮನೆಯಲ್ಲಿ ಒಂಟಿಯಾಗಿದ್ದ ಗೆಳೆಯನ 60 ವರ್ಷದ ವಿಧವೆ ತಾಯಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ವಿಕಾಸ್ ಮದ್ಯ ಸೇವನೆ ಮಾಡಿದ್ದ ಎಂದು ತಿಳಿದು ಬಂದಿದೆ. ಅತ್ಯಾಚಾರದ ಬಳಿಕ ಮಹಿಳೆಯ ಮೇಲೆ ಹಲ್ಲೆಗೈದಿರುವ ವಿಕಾಸ್, ವಿಷಯ ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದಾನೆ.

ಕೊನೆಗೆ ಮಹಿಳೆಯನ್ನ ಮನೆಯಲ್ಲಿ ಬಂಧಿಸಿ ಎಸ್ಕೇಪ್ ಆಗಿದ್ದಾನೆ. ಮಹಿಳೆ ಸಹಾಯಕ್ಕೆ ಕೂಗುತ್ತಿರುವ ಧ್ವನಿ ಕೇಳಿದ ನೆರೆಹೊರೆಯವರು ಬಾಗಿಲು ತೆರೆದಿದ್ದಾರೆ. ಹಲ್ಲೆಗೊಳಗಾದ ಮಹಿಳೆಯನ್ನ ಬರ್ಡೋಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.


Spread the love

About Laxminews 24x7

Check Also

ಜಿಬಿಎ 5 ನಗರ ಪಾಲಿಕೆಯ ವಾರ್ಡ್‌ಗಳ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

Spread the loveಬೆಂಗಳೂರು: ಜಿಬಿಎ  ವ್ಯಾಪ್ತಿಯ 5 ನಗರ ಪಾಲಿಕೆಯ ವಾರ್ಡ್‌ಗಳಿಗೆ ಮೀಸಲಾತಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜನವರಿ 8ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ