Breaking News

ಕೊರೊನಾ ಪರೀಕ್ಷೆಗೆ 400 ರೂ. ದರ ನಿಗದಿ ಪಡಿಸಲು ಸುಪ್ರೀಂ ಸೂಚನೆ

Spread the love

ನವದೆಹಲಿ,ನ.24- ದೇಶಾದ್ಯಂತ ಕೊರೊನಾ ಪರೀಕ್ಷೆಗಾಗಿ ಕೇವಲ 400 ರೂ. ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಅಂಗೀಕರಿಸಿದ್ದು, ಕೇಂದ್ರ ಆರೋಗ್ಯ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.

ವಕೀಲ ಅಜಯ್ ಅಗರ್‍ವಾಲ್‍ಎಂಬುವರು ಸುಪ್ರೀಂಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ದೇಶಾದ್ಯಂತ ಕೊರೊನಾ ಪರೀಕ್ಷೆಗಾಗಿ ಏಕರೂಪದ ಕನಿಷ್ಟ ದರವನ್ನು ನಿಗದಿಮಾಡಬೇಕೆಂದು ಮನವಿ ಮಾಡಿದ್ದಾರೆ.

ಅರ್ಜಿ ವಿಚಾರಣೆಗೆ ಅಂಗೀಕರಿಸುವುದಾಗಿ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಹ್ಮಣ್ಯ ಅವರು ತಿಳಿಸಿದ್ದು, ಕೊರೊನಾ ಚಿಕಿತ್ಸಾ ವೆಚ್ಚ ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಜೊತೆಗೆ ಕಡಿಮೆ ಪರೀಕ್ಷಾ ವೆಚ್ಚದ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಹೇಳಿದೆ.

ಸದ್ಯದ ಪರಿಸ್ಥಿತಿಯಲ್ಲಿ ದೇಶಾದ್ಯಂತ ಬೇರೆ ಬೇರೆ ದರಗಳಿವೆ. 900 ರೂ.ನಿಂದ 2800 ರೂ.ವರೆಗೂ ದರ ನಿಗದಿಯಾಗಿದೆ. ವಾಸ್ತವವಾಗಿ ಆರ್‍ಟಿಪಿಸಿಆರ್ ಪರೀಕ್ಷೆಯ ಕಿಟ್ ಭಾರತೀಯ ಮಾರುಕಟ್ಟೆಯಲ್ಲಿ 200 ರೂ.ಗೆ ಸಿಗುತ್ತಿದೆ. ಈ ಪರೀಕ್ಷೆಗೆ ಬೇರೆ ಯಾವುದೇ ಪ್ರಕ್ರಿಯೆಗಳಿಲ್ಲ. ಯಂತ್ರೋಪಕರಣಗಳನ್ನು ಬಳಸುತ್ತಿಲ್ಲ. 200 ರೂ.ಗಳ ಕಿಟ್‍ನಿಂದಲೇ ಪರೀಕ್ಷಾ ಫಲಿತಾಂಶ ತಿಳಿದುಬರುತ್ತಿದೆ. ಆದಾಗ್ಯೂ ಕೆಲವು ರಾಜ್ಯಗಳು ದುಬಾರಿ ಶುಲ್ಕವನ್ನು ನಿಗದಿಮಾಡಿವೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ