Breaking News

ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆ ಹಳೇಬೀಡು ಹೊಯ್ಸಳೇಶ್ವರ ದೇವಾಲಯದ ವಿದ್ಯುತ್ ಸಂಪರ್ಕ ಕಡಿತ

Spread the love

ಹಾಸನ: ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಜಿಲ್ಲೆಯ ಬೇಲೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಹಳೇಬೀಡು ಹೊಯ್ಸಳೇಶ್ವರ ದೇವಾಲಯದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಕತ್ತಲಲ್ಲೇ ದೇವರ ದರ್ಶನ ಮಾಡುವಂತಾಗಿದೆ. 6 ತಿಂಗಳಿಂದ ಸುಮಾರು 45,000 ರೂ. ವಿದ್ಯುತ್ ಬಿಲ್‍ಅನ್ನು ಪುರಾತತ್ವ ಇಲಾಖೆ ವಿಭಾಗ ಪಾವತಿಸಬೇಕಿದೆ. ಪ್ರತಿನಿತ್ಯ ದೇಗುಲಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರು ದೇವಾಲಯದ ಒಳಗೆ ಕತ್ತಲೆಯ ಇರುವ ಕಾರಣ ದೇಗುಲದ ಒಳಭಾಗದ ಶಿಲ್ಪಕಲೆಯನ್ನು ಸವಿಯಲಾಗದೆ ನಿರಾಶರಾಗುತ್ತಿದ್ದಾರೆ. ಸಾವಿರಾರು ಜನ ಭೇಟಿ ನೀಡುವ ದೇಗುಲದ ವಿದ್ಯುತ್ ಬಿಲ್ ಭರಿಸಲಾಗದ ಪುರಾತತ್ವ ಇಲಾಖೆ ವಿರುದ್ಧ ಪ್ರವಾಸಿಗರು ಬೇಸರ ಹೊರಹಾಕುತ್ತಿದ್ದಾರೆ.


Spread the love

About Laxminews 24x7

Check Also

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Spread the loveನವದೆಹಲಿ: ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ