Breaking News

ಕೊರೊನಾ ಲಸಿಕೆ ಪ್ರಯೋಗಕ್ಕೆ ಒಳಗಾದ ಮೈಸೂರಿನ ವೈದ್ಯ ದಂಪತಿ

Spread the love

ಮೈಸೂರು: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿರುವ ಪ್ರಯೋಗ ಹಂತದಲ್ಲಿರುವ ಕೋವಿಶಿಲ್ಡ್‌ ಲಸಿಕೆಯನ್ನು ಮೈಸೂರಿನ ವೈದ್ಯ ದಂಪತಿಯನ್ನು ಹಾಕಿಸಿಕೊಂಡಿದ್ದಾರೆ.

3ನೇ ಹಂತದ ಲಸಿಕೆಯನ್ನು ಮೈಸೂರಿನ ವೈದ್ಯೆ ಶಿಲ್ಪ ಸಂತೃಪ್ತ್ ಹಾಗೂ ಅವರ ಪತಿ ಡಾ. ಸಂತೃಪ್ತ್ ಹಾಕಿಸಿ ಕೊಂಡಿದ್ದಾರೆ. ಈ ಬಗ್ಗೆ ಡಾ. ಶಿಲ್ಪ ಸಂತೃಪ್ತ್ ಮಾತನಾಡಿದ್ದಾರೆ.

ಅ. 1 ರಂದು ಕೊರೊನಾ‌ ಲಸಿಕೆ ಹಾಕಿಸಿಕೊಂಡಿರುವ ವೈದ್ಯೆ ಶಿಲ್ಪ ಲಸಿಕೆ ಪಡೆದು 28 ದಿನಗಳಿಂದ ಆರೋಗ್ಯದಿಂದಿದ್ದಾರೆ. ಇನ್ನೂ ಎರಡು ಇಂಜೆಕ್ಷನ್ ಪಡೆಯಬೇಕಿದ್ದು ಮುಂದಿನ ತಿಂಗಳು ಮತ್ತೊಂದು ಇಂಜೆಕ್ಷನ್ ಪಡೆಯಲಿದ್ದಾರೆ.

ಮೊದಲ 36 ಗಂಟೆ ಸುಸ್ತು ಮೈಕೈ ನೋವು ಕಾಣಿಸೊಕೊಂಡಿದ್ದು ಬಿಟ್ಟರೆ ಮತ್ಯಾವ ಸಮಸ್ಯೆ ಕಾಣಿಸಿಲ್ಲ. ವೈದ್ಯೆಯಾಗಿ ನಾನೇ ಜವಬ್ದಾರಿ ‌ನಿರ್ವಹಿಸದಿದ್ದರೆ ಮತ್ಯಾರು ಎನ್ನುವ ಉದ್ದೇಶದಿಂದ ಲಸಿಕೆ ಪಡೆದಿದ್ದೇನೆ. ಲಸಿಕೆ ಪಡೆದ ನಂತರ ನನ್ನಲ್ಲಿ‌ ಯಾವುದೇ ಬದಲಾವಣೆ ಆಗಿಲ್ಲ. ನನಗಿಂತ ಮುಂಚಿತವಾಗಿ ಹಲವು ವೈದ್ಯರು ಲಸಿಕೆ ಪಡೆದಿದ್ದರು. ನಾನು‌ ನನ್ನ‌ ಪತ್ನಿ ಇಬ್ಬರು ಲಸಿಕೆ ಪಡೆದಿದ್ದೇವೆ ಎಂದು ಶಿಲ್ಪಾ ಹೇಳಿದ್ದಾರೆ.

ನಾವು ಫೇಸ್ 3 ನಲ್ಲಿ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದೇನೆ. ಫೇಸ್ 3 ವಿಭಾಗದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಹಾಗೂ 65 ವರ್ಷದ ಒಳಗಿನ ವ್ಯಕ್ತಿಗಳ ಮೇಲೆ ಲಸಿಕೆ ಪ್ರಯೋಗ ಆಗಲಿದೆ. ಲಸಿಕೆ ಪಡೆದ ನನ್ನ ಸ್ನೇಹಿತರಲ್ಲಿ ಒಬ್ಬರಿಗೆ ಸಾಮಾನ್ಯ ಜ್ವರ ಬಂದಿತ್ತು ಅಷ್ಟೇ. ಲಸಿಕೆ‌ ಪಡೆದ ನಂತರ‌ ಕೊರೊನಾ ಲಕ್ಷಣಗಳು ಕಾಣಿಸಿಲ್ಲ. ಲಸಿಕೆ ಪ್ರಯೋಗಕ್ಕೂ ಮುನ್ನ ನನಗೂ ಆತಂಕ ಇತ್ತು. ಆದರೆ ಲಸಿಕೆ ಪ್ರಯೋಗಕ್ಕೆ ಒಳಗಾಗೋದು ನಮ್ಮ ಜವಾಬ್ದಾರಿ ಎಂದು ತಿಳಿಸಿದ


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ