ಬೆಂಗಳೂರು: ನಮ್ಮನ್ನ ಡ್ರಗ್ಸ್ ವಿಚಾರವಾಗಿ ಕರೆದಿಲ್ಲ ಅಂತಾ ನಿರ್ಮಾಪಕ ಸೌಂದರ್ಯ ಜಗದೀಶ್ ಪತ್ನಿ ರೇಖಾ ಹೇಳಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಕೇಸ್ಗೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಸೌಂದರ್ಯ ಜಗದೀಶ್ ದಂಪತಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು ಎನ್ನಲಾಗಿತ್ತು. ಅದರಂತೆ ಇಂದು ಸಿಸಿಬಿ ಅಧಿಕಾರಿಗಳ ವಿಚಾರಣೆಗೆ ಸೌಂದರ್ಯ ದಂಪತಿ ವಿಚಾರಣೆಗೆ ಹಾಜರಾಗಿ ವಾಪಸ್ ಆಗಿದ್ದಾರೆ.
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿರುವ ಸೌಂದರ್ಯ ಜದಗೀಶ್ ದಂಪತಿ.. ನಮ್ಮನ್ನ ಡ್ರಗ್ಸ್ ವಿಚಾರವಾಗಿ ಕರೆದಿಲ್ಲ. ನಾವು ರಾಮ್ ಲೀಲಾ ಸಿನಿಮಾ ನಿರ್ಮಾಣ ಮಾಡಿದ್ವಿ. ಅದರಲ್ಲಿ ಸಂಜನಾ ಆಯಕ್ಟ್ ಮಾಡಿದ್ದರು. ರಾಮ್ ಲೀಲ್ ಸಿನಿಮಾ ಬಗ್ಗೆ ಮಾಹಿತಿ ಕೇಳಿದ್ರು. ಆ ವಿಚಾರವಾಗಿ ಚಿತ್ರದಲ್ಲಿ ಸಂಜನಾಗೆ ಎಷ್ಟು ಹಣ ಕೊಟ್ಟಿದ್ರಿ?ಚೆಕ್ನಲ್ಲಿ ಪೇಮೆಂಟ್ ಕೊಟ್ಟಿದ್ರಾ? ಅಥವಾ ಕ್ಯಾಶ್ ನೀಡಿದ್ರಾ? ಎಂದು ಕೇಳಿದ್ರು. ಚಿತ್ರದ ಬಗ್ಗೆ ಮಾತ್ರ ಮಾಹಿತಿ ಕೇಳಿದ್ರು, ನಾವೂ ಕೊಟ್ಟಿದ್ದೇವೆ. ಡ್ರಗ್ಸ್ ಲಿಂಕ್ ಕೇಸ್ಗೂ ನಮಗೂ ಯಾವುದೇ ಸಂಬಂಧ ಇಲ್ಲ ಅಂತಾ ಹೇಳಿದರು