Breaking News
Home / ಅಂತರಾಷ್ಟ್ರೀಯ / ಜೈಲು ಹಕ್ಕಿಯಾಗಿರೋ ಸಂಜನಾ ವಿವಾಹಿತೆಯಾ.. ಅವಿವಾಹಿತೆಯಾ..?

ಜೈಲು ಹಕ್ಕಿಯಾಗಿರೋ ಸಂಜನಾ ವಿವಾಹಿತೆಯಾ.. ಅವಿವಾಹಿತೆಯಾ..?

Spread the love

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿಯ ಮದುವೆ ಫೋಟೋ ಬಹಿರಂಗಗೊಂಡಿತ್ತು. ನನಗೆ ವಿವಾಹವಾಗಿಲ್ಲ ಎಂದು ಹೇಳುತ್ತಿದ್ದ ನಟಿಯ ಮದುವೆ ಫೋಟೋ ನೋಡಿ ಜನ ಶಾಕ್ ಆಗಿದ್ರು. ಈ ಬಗ್ಗೆ ಸಂಜನಾ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ.

ಆದ್ರೆ ಈಗ ಜೈಲು ಹಕ್ಕಿಯಾಗಿರೋ ನಟಿ ಸಂಜನಾ ಗಲ್ರಾನಿ ವಿವಾಹಿತೆಯಾ..

ಅವಿವಾಹಿತೆಯಾ ಎಂಬ ಗೊಂದಲ ಉಂಟಾಗಿದೆ. ಯಾಕಂದ್ರೆ ಈಗಲೂ ತಾನು ಅವಿವಾಹಿತೆ ಎಂದೇ ಸಂಜನಾ ಹೇಳಿಕೊಳ್ಳುತ್ತಿದ್ದಾಳೆ. ಕೋರ್ಟ್​​ಗೆ ಸಲ್ಲಿಸಿದ ಅರ್ಜಿಯಲ್ಲಿ ಕುಮಾರಿ ಸಂಜನಾ ಎಂದು ಉಲ್ಲೇಖಿಸಿದ್ದಾಳೆ. ಹೀಗಾಗಿ ಅರ್ಚನಾ ಅಲಿಯಾಸ್ ಸಂಜನಾ ಗಲ್ರಾನಿ ಈ ನಡೆ ಅಚ್ಚರಿ ಹುಟ್ಟಿಸಿದೆ. ಇನ್ನೂ 4 ದಿನ ಗಲ್ರಾನಿಗೆ ಹೈಕೋರ್ಟ್​ನಿಂದ ರಿಲೀಫ್ ಸಿಗಲ್ಲ. ಹೈಕೋರ್ಟ್ ಸಿಸಿಬಿಗೆ ನೋಟಿಸ್ ನೀಡಿ ವಿಚಾರಣೆ ಮುಂದೂಡಿದೆ. ಹಾಗೂ ಅಕ್ಟೋಬರ್​ 16ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ