Breaking News

ಅಮ್ಮ ಏಳಮ್ಮ, ಮಾತಾಡಮ್ಮ.. ಮೃತ ತಾಯಿಯನ್ನು ಎಬ್ಬಿಸಲು ಮರಿ ಕೋತಿ ಯತ್ನ

Spread the love

ಬೆಳಗಾವಿ: ವಿದ್ಯುತ್ ಸ್ಪರ್ಶಿಸಿ ತಾಯಿ ಕೋತಿ ಮೃತಪಟ್ಟಿದ್ದು, ಅದರ ಮುಂದೆ ಕೂತು ಮರಿ ಮಂಗ ರೋದಿಸುತ್ತಿರುವ ಹೃದಯ ವಿದ್ರಾವಕ ಘಟನೆ ಕೊಣ್ಣೂರು ಗ್ರಾಮದಲ್ಲಿ ನಡೆದಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ವಿದ್ಯುತ್ ಸ್ಪರ್ಶಿಸಿ ತಾಯಿ ಕೋತಿ ಸಾವನ್ನಪ್ಪಿದೆ. ಅಮ್ಮನನ್ನು ಕಳೆದು ಕೊಂಡು ಮರಿ ಕೋತಿ ರೋದಿಸುತ್ತಿರುವ ದೃಶ್ಯ ಕರುಳು ಸಹ ಕಿತ್ತು ಬರುವ ಹಾಗಿದೆ.

 ತಾಯಿ ಪ್ರೀತಿಯೇ ಅಂತಹದ್ದು.

ಅದು ಮನುಷ್ಯರಾಗಲಿ ಅಥವಾ ಪ್ರಾಣಿಗಳಾಗಲಿ. ತಾಯಿಯ ಆಶ್ರಯದಲ್ಲಿದ್ದ ಮರಿ ಕೋತಿ ಈಗ ಅನಾಥವಾಗಿದೆ. ಅಮ್ಮ ಏಳು, ಏನಾಯ್ತು ಅಂತ ಕಣ್ಣೀರು ಹಾಕಿದೆ. ಸ್ಥಳೀಯ ಕೆಲ ಯುವಕರು ಮೃತ ತಾಯಿ ಕೋತಿಗೆ ಪೂಜೆ ಮಾಡಿದ್ರು. ಈ ವೇಳೆ ತಾಯಿಯನ್ನು ತಬ್ಬಿ ಹಿಡಿದು ಅದರ ಮರಿ ತನ್ನನ್ನು ಅಮ್ಮನಿಂದ ದೂರ ಮಾಡಬೇಡಿ ಅಂತಾ ರೋಧಿಸಿತು.

ಇನ್ನು ಮಣ್ಣು ಮಾಡುವ ವೇಳೆ ಮರಿ ಕೋತಿ ತಾಯಿಯ ಮೃತ ದೇಹದ ಮೇಲೆ ಹೋಗಿ ಕೂತು ಯಾಕೆ ಮಾತಾಡ್ತಿಲ್ಲ ಅಮ್ಮ, ಏಳು ಎಂದು ಅದನ್ನು ಎಬ್ಬಿಸಲು ಪ್ರಯತ್ನಿಸಿತು. ಮರಿಯ ಗೋಳಾಟ ನೋಡಿ ಕೊಣ್ಣೂರು ಗ್ರಾಮದ ಜನ ಮೂಕವಿಸ್ಮಿತರಾದ್ರು. ಮರಿ ಕೋತಿಯ ಪ್ರೀತಿಗೆ ಕಣ್ಣೀರು ಸುರಿಸಿದ್ರು. ಸದ್ಯ ಸ್ಥಳೀಯರಿಂದ ತಾಯಿ ಕೋತಿ ಅಂತ್ಯ ಸಂಸ್ಕಾರ ನೆರವೇರಿದೆ. ಯುವಕರು ಮರಿ ಕೋತಿಗೆ ಹಾಲು ಕುಡಿಸಿ ಸಮಾಧಾನ ಮಾಡಿದ್ದಾರೆ. ತಾಯಿ ಹಾಗೂ ಮರಿ ಕೋತಿಗಳ ಗೋಳಾಟದ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      


Spread the love

About Laxminews 24x7

Check Also

ಕನಿಷ್ಠ ವೇತನಕ್ಕೆ ಒತ್ತಾಯಿಸಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮನವಿ

Spread the loveಬೆಳಗಾವಿ: ರಾಜ್ಯದ ಅನುಸೂಚಿತ ಉದ್ದಿಮೆಗಳಿಗೆ ಕನಿಷ್ಠ ವೇತನ ಪ್ರಕಟಿಸಬೇಕಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ