Breaking News
Home / new delhi / ಗಡಿ ನಿಯಂತ್ರಣ ರೇಖೆ ಬಳಿ 60 ಸಾವಿರ ಸೈನಿಕರನ್ನು ನೇಮಿಸಿದ ಚೀನಾ

ಗಡಿ ನಿಯಂತ್ರಣ ರೇಖೆ ಬಳಿ 60 ಸಾವಿರ ಸೈನಿಕರನ್ನು ನೇಮಿಸಿದ ಚೀನಾ

Spread the love

ದೆಹಲಿ: ಭಾರತ ಚೀನಾ ನಡುವೆ ಸಂಘರ್ಷ ಯುದ್ಧ ಭೀತಿ ಸೃಷ್ಟಿಸುತ್ತಿದೆ. ಹೀಗಾಗಿ ಎರಡು ದೇಶಗಳು ಸೈಲೆಂಟಾಗಿ ತಾಲೀಮನ್ನ ಆರಂಭಿಸಿದ್ದು, ಚೀನಾ 60 ಸಾವಿರ ಸೈನಿಕರನ್ನು ಗಡಿಗೆ ಕಳುಹಿಸಿದೆ. ‘ಎಲ್‌ಎಸಿ’ಯಿಂದ ಕಾಲ್ಕೀಳಲು ಚೀನಾ ಸೈನಿಕರು ಮೀನಮೇಷ ಎಣಿಸುತ್ತಿದ್ದಾರೆ. ಈ ಹೊತ್ತಲ್ಲೇ ಭಾರತ ದಿಟ್ಟ ನಿರ್ಧಾರ ಕೈಗೊಂಡಿದೆ.

ಭಾರತ ಚೀನಾ ಗಡಿ ವಿವಾದ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಸುಮಾರು 60 ಸಾವಿರ ಸೈನಿಕರನ್ನು ಚೀನಾ ನೇಮಿಸಿದೆ ಅಂತಾ ಅಮೆರಿಕ ಭಾರತಕ್ಕೆ ಎಚ್ಚರಿಕೆ ನೀಡಿದೆ.

ಚಳಿಗಾಲದ ಸಂಘರ್ಷಕ್ಕೆ ಚೀನಾ ರೆಡಿಯಾಗ್ತಿದ್ದು, ಶಸ್ತ್ರಾಸ್ತ್ರಗಳನ್ನು ಗಡಿಗೆ ಸಾಗಿಸ್ತಿದೆ. ಎಷ್ಟು ಬಾರಿ ಭಾರತ ಹಾಗೂ ಚೀನಾ ನಡುವೆ ಮಾತುಕತೆ ನಡೆದರೂ ಯಾವುದೂ ಫಲ ನೀಡಿಲ್ಲ. ಚೀನಾ ಭಾರತಕ್ಕೆ ಕೊಟ್ಟ ವಾಗ್ದಾನ ಪದೇಪದೆ ಮುರಿಯುತ್ತಿದೆ. ಅಲ್ದೆ, ಗಡಿಯಲ್ಲಿ ಸೈನ್ಯ ಹೆಚ್ಚಿಸಿ ಭಾರತವನ್ನ ಕೆಣಕುತ್ತಿದೆ‌. ಇತ್ತ ಭಾರತ ಕಳೆದ 35ದಿನಗಳಲ್ಲಿ 10 ಕ್ಷಿಪಣಿಗಳ ಪ್ರಯೋಗ ನಡೆಸುವ ಮೂಲಕ ಡ್ರ್ಯಾಗನ್ ನಾಡಿಗೆ ವಾರ್ನಿಂಗ್ ರವಾನಿಸಿದೆ.

ಕೊಬ್ಬಿದ ಚೀನಾ ಪಡೆಗೆ ವಾರ್ನಿಂಗ್ ಕೊಟ್ಟ ಭಾರತ!
ಚೀನಾ ಕುತಂತ್ರಕ್ಕೆ ತಕ್ಕ ತಿರುಗೇಟು ನೀಡಲು ಭಾರತ ಭರ್ಜರಿ ತಯಾರಿ ನಡೆಸಿದೆ. ಭಾರತೀಯ ವಾಯುಪಡೆ ಕ್ಷಿಪಣಿಗಳ ಸುಂಟರಗಾಳಿ ಎಬ್ಬಿಸಿದೆ. ಗಡಿ ಬಿಕ್ಕಟ್ಟಿನ ನಡುವೆ ಭಾರತ ಕಳೆದ 35 ದಿನಗಳಲ್ಲಿ 10 ಕ್ಷಿಪಣಿಗಳನ್ನ ಯಶಸ್ವಿಯಾಗಿ ಪರೀಕ್ಷಿಸಿ ಕೊಬ್ಬಿದ ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿದೆ. ಹಾಗಾದ್ರೆ ಕಳೆದ 10 ದಿನದಲ್ಲಿ ಭಾರತ ಪರೀಕ್ಷೆ ನಡೆಸಿರುವ ಆ ಪ್ರಮುಖ ಕ್ಷಿಪಣಿಗಳು ಯಾವುವು ಅನ್ನೋದಾದ್ರೆ.

ಕುತಂತ್ರಿ ಚೀನಾಗೆ ವಾರ್ನಿಂಗ್!
ಸೆಪ್ಟೆಂಬರ್ 7ರಂದು ಭಾರತ ‘ಹೈಪರ್ ಸಾನಿಕ್ ಟೆಕ್ನಾಲಜಿ ಡೆಮಾನ್ ವೆಹಿಕಲ್’ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ, ಅಂದರೆ ಸೆಪ್ಟೆಂಬರ್ 22ರಂದು ಲೇಸರ್ ಆಧಾರಿತ ಟ್ಯಾಂಕ್ ನಿಗ್ರಹ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. ಸೆಪ್ಟೆಂಬರ್ 22ರಂದು ಅಭ್ಯಾಸ್ ಹೈ ಸ್ಪೀಡ್ ಹಾಗೂ 23ರಂದು ಪೃಥ್ವಿ 2 ಕ್ಷಿಪಣಿಗಳ ಪ್ರಯೋಗ ಮಾಡಲಾಗಿದೆ. ಈ ಮಧ್ಯೆ ಸೆಪ್ಟೆಂಬರ್ 30ರಂದು ‘ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್’ ಟೆಸ್ಟಿಂಗ್ ಕೂಡ ನಡೆದಿದೆ. ಅಕ್ಟೋಬರ್ 3ರಂದು ‘ಸೂಪರ್ ಸಾನಿಕ್ ಶೌರ್ಯ’ ವ್ಯೂಹಾತ್ಮಕ ಪರೀಕ್ಷೆ ಮಾಡಿದ್ದು, ಅಕ್ಟೋಬರ್ 5ರಂದು ಜಲಾಂತರ್ಗಾಮಿ ನಾಶ ಮಾಡಬಲ್ಲ ಕ್ಷಿಪಣಿಯ ಪರೀಕ್ಷೆಯನ್ನ ಯಶಸ್ವಿಯಾಗಿ ನಡೆಸಲಾಗಿದೆ.

ಇದಿಷ್ಟೇ ಅಲ್ಲ, ಡಿಆರ್‌ಡಿಒ ನಿರ್ಮಿತ ನಿರ್ಭಯ್‌ ಸೂಪರ್‌ ಸಾನಿಕ್‌ ಕ್ಷಿಪಣಿ ಪರೀಕ್ಷೆಗೂ ಮುಹೂರ್ತ ನಿಗದಿ ಮಾಡಿದೆ. ಮುಂದಿನ ವಾರ ನಿರ್ಭಯ್ ಕ್ಷಿಪಣಿ ಪ್ರಯೋಗ ನಡೆಯಲಿದೆ. ಇದು ಈ ಕ್ಷಿಪಣಿಯ 7ನೇ ಮತ್ತು ಅಂತಿಮ ಪರೀಕ್ಷೆಯಾಗಿದೆ. ಒಟ್ನಲ್ಲಿ, ಭಾರತಕ್ಕೆ ಮಗ್ಗುಲ ಮುಳ್ಳಾಗಿರುವ ಚೀನಾಗೆ ತಕ್ಕ ಪಾಠ ಕಲಿಸಲು ಭಾರತೀಯ ಪಡೆಗಳು ತುದಿಗಾಲಲ್ಲಿ ನಿಂತಿದ್ದು, ಅಕಸ್ಮಾತ್ ಯುದ್ಧ ನಡೆದರೆ ಚೀನಾ ಬಾಲ ಮುದುರಿಕೊಂಡು ಎಸ್ಕೇಪ್ ಆಗೋದು ಗ್ಯಾರಂಟಿ.


Spread the love

About Laxminews 24x7

Check Also

ವನ್ಯಜೀವಿಗಳ ದಾಹ ತೀರಿಸುವ ಕೃತಕ ನೀರಿನ ತೊಟ್ಟಿಗಳು

Spread the loveಹಾನಗಲ್: ಕಡು ಬೇಸಿಗೆ ನಾಡಿನೆಲ್ಲೆಡೆ ಕುಡಿಯುವ ನೀರಿಗೆ ಅಭಾವ ಸೃಷ್ಟಿಸಿದೆ. ಕಾಡಿನಲ್ಲಿ ವನ್ಯ ಜೀವಿಗಳು ಅನುಭವಿಸುತ್ತಿರುವ ಸಂಕಷ್ಟ ಅರಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ