Breaking News

ರಕ್ಷಣೆಯಲ್ಲಿ ಕರ್ತವ್ಯ ವಹಿಸಿದ್ದ ಧೀರ Rambo ಹೃದಯಾಘಾತಕ್ಕೆ ಬಲಿ

Spread the love

ಕೊಡಗು: ಜಿಲ್ಲಾ ಪೊಲೀಸ್ ಶ್ವಾನ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಱಂಬೋ ಎಂಬ ಶ್ವಾನ ಕೊನೆಯುಸಿರೆಳೆದಿದೆ. 7 ವರ್ಷದ ಱಂಬೋ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕರ್ತವ್ಯಕ್ಕೆ ಎಂದು ತೆರಳಿದ್ದ ಶ್ವಾನ ಅಲ್ಲಿನ ತಾಪ ತಾಳಲಾರದೆ ನಿನ್ನೆ ರಾತ್ರಿ ಹೃದಯಾಘಾತವಾಗಿ ಸಾವನ್ನಪ್ಪಿದೆ.

ಏಳು ವರ್ಷಗಳಿಂದ ಬಾಂಬ್ ಪತ್ತೆ ದಳದಲ್ಲಿ ಸತತವಾಗಿ ಸೇವೆ ಸಲ್ಲಿಸಿದ್ದ ನೆಚ್ಚಿನ ಪೊಲೀಸ್​ ಶ್ವಾನಕ್ಕೆ ಜಿಲ್ಲಾ ಪೊಲೀಸರ ವತಿಯಿಂದ ಗೌರವಪೂರ್ಣ ಅಂತಿಮ ವಿದಾಯ ನೀಡಲಾಯಿತು.

ಱಂಬೋ ರಾಜ್ಯಕ್ಕೆ ಆಗಮಿಸುತ್ತಿದ್ದ ಗಣ್ಯಾತಿ ಗಣ್ಯರ ಕಾರ್ಯಕ್ರಮದ ಭದ್ರತೆಯಲ್ಲಿ ಭಾಗಿಯಾಗಿತ್ತು. ಪೊಲೀಸ್ ಕವಾಯತು ಮೈದಾನದಲ್ಲಿ ಶ್ವಾನದ ಅಂತ್ಯಕ್ರಿಯೆ ನೆರವೇರಿಸಲಾಯಿತು.

 


Spread the love

About Laxminews 24x7

Check Also

ಗ್ರಾಮೀಣ ಭಾಗದಲ್ಲಿ ಮಹಿಳಾ ಸಬಲೀಕರಣಕ್ಕೆ ಶ್ರಮಿಸಲು ಕರೆ

Spread the loveಬೆಳಗಾವಿ: ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸಬಲೀಕರಣದಿಂದ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ. ಹೀಗಾಗಿ ಗ್ರಾಮ ಮಟ್ಟದಲ್ಲಿ ಕೆಲಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ