Breaking News

ಮಳೆಯಿಂದ ರೈತ ಮಹಿಳೆಯ ಮನೆ ಕುಸಿತ – ಎತ್ತುಗಳಿಗೆ ಗಾಯ, 3 ಮೇಕೆ ಸಾವು

Spread the love

ಹಾಸನ: ನಿರಂತರ ಮಳೆಯಿಂದ ರೈತ ಮಹಿಳೆಯ ಮನೆ ಮತ್ತು ಕೊಟ್ಟಿಗೆ ಕುಸಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಪುಟ್ಟಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ಮಳೆಗೆ ಸಂಪೂರ್ಣ ಮನೆ ಕುಸಿದು ಬಿದಿದ್ದು, ಈ ವೇಳೆ ಕೊಟ್ಟಿಗೆಯಲ್ಲಿದ್ದ ಮೂರು ಮೇಕೆ ಸಾವನ್ನಪ್ಪಿವೆ ಜೊತೆಗೆ ಎರಡು ಎತ್ತುಗಳಿಗೆ ಗಾಯವಾಗಿದೆ. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಣಾಪಾಯದಿಂದ ಪಾರಾಗಿದ್ದಾರೆಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗಿದ್ದ ಪರಿಣಾಮ ಶಿಥಿಲಗೊಂಡಂತಾಗಿದ್ದ, ರೈತ ಮಹಿಳೆ ಜಯಮ್ಮ ಅವರ ಮನೆ ಮತ್ತು ಕೊಟ್ಟಿಗೆ ಕುಸಿದು ಬಿದ್ದಿದೆ. ಪರಿಣಾಮ ಕೊಟ್ಟಿಗೆಯೊಳಗಿದ್ದ ಮೂರು ಮೇಕೆ ಸಾವನ್ನಪ್ಪಿವೆ. ಆಶ್ರಯವಾಗಿದ್ದ ಮನೆ ಮತ್ತು ಜೀವನಾಧಾರವಾಗಿದ್ದ ಮೇಕೆಗಳ ಸಾವಿನಿಂದ ರೈತ ಮಹಿಳೆ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ