Breaking News

ಮೂರು ವರ್ಷದ ಬಾಲಕಿ ಮೇಲೆ  ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ

Spread the love

ಉತ್ತರ ಪ್ರದೇಶ:  ಮೂರು ವರ್ಷದ ಬಾಲಕಿ ಮೇಲೆ  ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಿದ  ಹೃದಯ ವಿದ್ರಾವಕ ಘಟನೆ  ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದಿದೆ. ಈ ಜಿಲ್ಲೆಯಲ್ಲಿ  ಕೇವಲ ಮೂರು  ವಾರಗಳಲ್ಲಿ  3 ನೇ ಪ್ರಕರಣ ಇದಾಗಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ.

ಬುಧವಾರದಿಂದ ನಾಪತ್ತೆಯಾಗಿದ್ದ ಬಾಲಕಿಗಾಗಿ  ಪೋಷಕರು ಎಲ್ಲೆಡೆ ಹುಡುಕಾಡಿದ್ದಾರೆ.  ಮರುದಿನ  ಗದ್ದೆಯಲ್ಲಿ ಬಾಲಕಿ ಶವ ಅತ್ಯಾಚಾರ ಎಸಗಿದ ಸ್ಥಿತಿಯಲ್ಲಿ    ಪತ್ತೆಯಾಗಿದೆ. ಬಾಲಕಿ ಮರಣೋತ್ತರ ವರದಿ ಬಂದಿದ್ದು, ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಬಾಲಕಿಯ ತಂದೆ ಪಕ್ಕದ ಹಳ್ಳಿಯ ಲೇಖ್ರಾಮ್‌ ಎಂಬವರ ಮೇಲೆ ಆರೋಪ ಹೊರಿಸಿದ್ದು ಹಳೇ ದ್ವೇಷ ಹಿನ್ನೆಲೆ ಈ ಕೃತ್ಯ ಎಸಗಿರುವ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

ಇನ್ನು ಇತ್ತೀಚೆಗೆ ಸ್ಕಾಲರ್ಶಿಪ್‌ ಅರ್ಜಿ ಭರ್ತಿ ಮಾಡಲೆಂದು ಮನೆಯಿಂದ ಶಾಲೆಗೆ ತೆರಳಿದ್ದ 17 ವರ್ಷದ ಯುವತಿ ನಾಪತ್ತೆಯಾಗಿದ್ದಳು. ಬಳಿಕ ಪಾಳು  ಬಿದ್ದ ಕೆರೆಯಲ್ಲಿ ಆಕೆಯ ಶವ ಪತ್ತೆಯಾಗಿತ್ತು.


Spread the love

About Laxminews 24x7

Check Also

ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕ

Spread the loveನವದೆಹಲಿ: ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್  ಅವರನ್ನ ಕೇಂದ್ರ ಸರ್ಕಾರ ನೇಮಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ