Breaking News

ರಾಜ್ಯದಲ್ಲಿ ಇವತ್ತು ದಾಖಲೆ ಬರೆದ ಕೊರೊನಾ- 9,860 ಮಂದಿಗೆ ಸೋಂಕು

Spread the love

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಹೊಸ ದಾಖಲೆ ಬರೆದಿದೆ. ಕಳೆದ ಆರು ತಿಂಗಳಿನಲ್ಲೇ ಇಂದು ಅತೀ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಕೊರೊನಾ ಹಬ್ಬುತ್ತಿರುವ ವೇಗ ಮತ್ತು ತೀವ್ರತೆ ಗಮನಿಸಿದಲ್ಲಿ ಇನ್ನು ಒಂದೆರಡು ದಿನಗಳಲ್ಲಿ 10 ಸಾವಿರ ಕೇಸ್ ದಾಟಿದರೂ ಅಚ್ಚರಿ ಇಲ್ಲ.

ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಅನ್ವಯ ಇಂದು ರಾಜ್ಯದಲ್ಲಿ 9,860 ಮಂದಿಗೆ ಸೋಂಕು ದೃಢವಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,61,341ಕ್ಕೇರಿದೆ. 6,287 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 2,60,913 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

 

 

ರಾಜ್ಯದಲ್ಲಿ ಇಂದು 113 ಮಂದಿ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 5,950ಕ್ಕೇರಿದೆ. 751 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಬೆಂಗಳೂರಿನಲ್ಲಿಯೂ ಕೊರೊನಾ ಕೇಸ್ ಮತ್ತೆ 3 ಸಾವಿರದ ಗಡಿ ದಾಟಿದ್ದು, 3,420 ಮಂದಿಗೆ ಸೋಂಕು ದೃಢಪಟ್ಟಿದೆ.

ಉಳಿದಂತೆ ಬಳ್ಳಾರಿ 433, ಬೆಳಗಾವಿ 470, ದಕ್ಷಿಣ ಕನ್ನಡ 414, ಮೈಸೂರು 667, ತುಮಕೂರು 357, ಶಿವಮೊಗ್ಗ 342, ಧಾರವಾಡ 327, ದಾವಣಗೆರೆ 321, ಬಾಗಲಕೋಟೆ 166, ಬೆಂಗಳೂರು ಗ್ರಾಮಾಂತರ 146, ಬೀದರ್ 62, ಚಾಮರಾಜನಗರ 67, ಚಿಕ್ಕಬಳ್ಳಾಪುರ 100, ಚಿಕ್ಕಮಗಳೂರು 117, ಚಿತ್ರದುರ್ಗ 174, ಗದಗ 195, ಹಾವೇರಿ 149, ಕಲಬುರಗಿ 194, ಕೊಡಗು 25, ಕೋಲಾರ 83, ರಾಮನಗರ 59, ಉಡುಪಿ 169, ಉತ್ತರ ಕನ್ನಡ 126, ವಿಜಯಪುರ 122, ಯಾದಗಿರಿ 106 ಮಂದಿಗೆ ಸೋಂಕು ದೃಢಪಟ್ಟಿದೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ