Breaking News

ಸ್ವಾಗತ ಕಮಾನಿನಲ್ಲಿ ಅಷ್ಟೇ ಸಕ್ಕರೆ ನಾಡು:

Spread the love

ಮಂಡ್ಯ: ಮೈಸೂರಿನಿಂದ ಬೆಂಗಳೂರಿಗೆ ಬರುವ ರಸ್ತೆಯ ಮಧ್ಯ ಭಾಗದಲ್ಲಿ ಸಕ್ಕರೆ ನಗರಿ ಮಂಡ್ಯಗೆ ಸ್ವಾಗತ ಎಂದು ಮಂಡ್ಯದ ಸ್ವಾಗತ ಕಮಾನನ್ನು ಹಾಕಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯಗೆ ಸಕ್ಕರೆ ನಾಡು ಎಂದು ಹೆಸರು ಬಂದಿದೆ. ಆದರೆ ಇದೀಗ ಮಂಡ್ಯ ಜಿಲ್ಲೆಯಲ್ಲಿ ಸಕ್ಕರೆ ಎನ್ನುವುದು ಕೇವಲ ಸ್ವಾಗತದ ಕಮಾನಿನಲ್ಲಿ ಇದೆ.

ಮಂಡ್ಯ ಜಿಲ್ಲೆಯ ಜೀವಾಳವಾಗಿದ್ದ ಮೈ ಶುಗರ್ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆಗಳ ಬಾಗಿಲು ಮುಚ್ಚಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಸಕ್ಕರೆ ಎಲ್ಲಾ ಬರಿದಾಗಿ ರೈತರು ಸಂಕಷ್ಟದ ಸ್ಥಿತಿಯಲ್ಲಿ ಇದ್ದಾರೆ. ಸರ್ಕಾರ ಹಾಗೂ ಮಂತ್ರಿಗಳು ಬದಲಾದರು ಸಹ ಮಂಡ್ಯ ಜಿಲ್ಲೆಯ ಪ್ರಮುಖ ಎರಡು ಸಕ್ಕರೆ ಕಾರ್ಖಾನೆಗಳ ಬಾಗಿಲು ತೆರೆದಿಲ್ಲ ಹಾಗೂ ರೈತರ ಹಣೆ ಬರಹವು ಬದಲಾಗಿಲ್ಲ. ಈಗಾಗಾಲೇ ಜಿಲ್ಲೆಯಲ್ಲಿ ಕಬ್ಬಿನ ಬೆಳೆಯ ಕಟಾವಿನ ಅವಧಿಗೂ ಮೀರಿ ಹೋಗಿದ್ದು, ಬೆಳೆ ಒಣಗಿ ಹೋಗುತ್ತಿವೆ. ಅಲ್ಲದೆ ಇದರಿಂದ ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಜಿಲ್ಲೆಯ ಮತ್ತೊಂದು ಅಘಾತಕಾರಿ ಸಂಗತಿಯಾಗಿದೆ.

ಮಂಡ್ಯ ನಗರದಲ್ಲಿರುವ ಮೈ ಶುಗರ್ ಕಾರ್ಖಾನೆ ರಾಜ್ಯದಲ್ಲಿರುವ ಸರ್ಕಾರದ ಏಕೈಕ ಸಕ್ಕರೆ ಕಾರ್ಖಾನೆಯಾಗಿದೆ. ಆದರೆ ಈ ಸಕ್ಕರೆ ಕಾರ್ಖಾನೆಯ ಬಾಗಿಲು ಹಾಕಿ ಐದು ವರ್ಷಗಳು ಕಳೆಯುತ್ತಾ ಬರುತ್ತಿವೆ. ಇನ್ನೂ ಪಾಂಡವಪುರ ಸಕ್ಕರೆ ಕಾರ್ಖಾನೆಯ ಬಾಗಿಲು ಹಾಕಿ ಮೂರು ವರ್ಷಗಳಿಗೂ ಅಧಿಕ ವರ್ಷಗಳಾಗಿವೆ. ಇಲ್ಲಿಯವರೆಗೆ ಸರ್ಕಾರ ಹಾಗೂ ಮಂತ್ರಿಗಳ ಬದಲಾಗುತ್ತಾ ಬರುತ್ತಿದ್ದಾರೆ. ಆದರೆ ಈ ಕಾರ್ಖಾನೆಗಳ ಬಾಗಿಲನ್ನು ತೆರೆಸಲು ಯಾರು ಸಹ ಮುಂದಾಗುತ್ತಿಲ್ಲ, ಪ್ರತಿ ಬಾರಿಯೂ ಈ ವರ್ಷ ಪ್ರಾರಂಭವಾಗುತ್ತೆ ಎಂದು ಭರವಸೆ ಮಾತ್ರ ನೀಡುತ್ತಿದ್ದಾರೆ. ಆದರೆ ಈ ಕಾರ್ಖಾನೆಗಳ ಬಾಗಿಲು ಮಾತ್ರ ತೆರದಿಲ್ಲ. ಕಳೆದ ಕೆಆರ್‍ಪೇಟೆ ಉಪಚುನಾವಣೆ ವೇಳೆ ಈ ಎರಡು ಕಾರ್ಖಾನೆಗಳನ್ನು ತೆರೆಯುವುದಾಗಿ ಭರವಸೆ ನೀಡಿದರು. ಆದರೆ ಕಾರ್ಖಾನೆ ತೆರೆಯುವ ನಿಟ್ಟಿನಲ್ಲಿ ಯಾವುದೇ ಕೆಲಸಗಳು ಆಗಿಲ್ಲ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ