Breaking News

ದನ ಕರುಗಳು ಸಜೀವ ದಹನವಾದ ಘಟನೆ ಕಿತ್ತೂರು ತಾಲೂಕಿನ ಎನ್ ತೇಗೂರು ಗ್ರಾಮದಲ್ಲಿ ನಡೆದಿದೆ.

Spread the love

ಕಿತ್ತೂರು: ಗುಡಿಸಿಲಿಗೆ ಬೆಂಕಿ ತಗುಲಿ ದನ ಕರುಗಳು ಸಜೀವ ದಹನವಾದ ಘಟನೆ ಕಿತ್ತೂರು ತಾಲೂಕಿನ ಎನ್ ತೇಗೂರು ಗ್ರಾಮದಲ್ಲಿ ನಡೆದಿದೆ.

ಎನ್ ತೇಗೂರು ಗ್ರಾಮದ ಶಿವರಾಯಪ್ಪ ಚಂದ್ರಪ್ಪ ಪಾಗಾದ ಎಂಬುವವರ ಹೊಲದಲ್ಲಿರುವ ಗುಡಿಸಲಿಗೆ ನಿನ್ನೆ ರಾತ್ರಿ ಆಕಸ್ಮೀಕ ಬೆಂಕಿ ಸುಮಾರು 3 ಲಕ್ಷ ಮೌಲ್ಯದ ಆಸ್ತಿ ಪಾಸ್ತಿ ಹಾನಿಯಾಗಿದೆ. ಅಲ್ಲದೇ 2 ಹೋರಿ, 3 ಆಕಳು , 2 ಕರು, 1 ಕುರಿ ಸಜೀವ ದಹನವಾಗಿದೆ.

ಜೀವನಕ್ಕೆ ಆಧಾರವಾಗಿದ್ದ ದನ ಕರು ಸಾವನ್ನಪಿದ್ದು, ಎಲ್ಲವನ್ನು ಕಳೆದುಕೊಂಡ ರೈತ ಶಿವರಾಯಪ್ಪ ಆಕ್ರಂದನ ಮುಗಿಲು ಮುಟ್ಟಿದೆ‌.

ನೆರವಿನ ಹಸ್ತ ಚಾಚಿದ ಸಮಾಜ ಸೇವಕ ಹಬೀಬ್ ಶಿಲ್ಲೇದಾರ್:

ಘಟನಾ ಸ್ಥಳಕ್ಕೆ ಶಾಸಕ ಸತೀಶ ಜಾರಕಿಹೊಳಿ ಅಭಿಮಾನಿ, ಸಮಾಜ ಸೇವಕ ಹಬೀಬ್ ಶಿಲ್ಲೇದಾರ್ ಬೇಟ್ಟಿ ನೀಡಿ ರೈತನಿಗೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ 25 ಸಾವಿರ ರೂ. ನೆರವು ನೀಡಿದರು.

ಈ ಸಂದಂಭ೯ದಲ್ಲಿ ಮಡಿವಾಳಯ್ಯ ಗುರುವೈನವರ, ಮಕಬೂಲ ಸನದಿ, ಅಡಿವೆಪ್ಪ ಕುರಿ, ಸುಭಾಸ ಹದ್ದನ್ನವರ, ಮೋನೇಶ ಪಾಗಾದ ಇದ್ದರು


Spread the love

About Laxminews 24x7

Check Also

ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ.ಕಾಲೆಮಿರ್ಚಿ ಪುಂಡ ಎಂಇಎಸ್ ಮುಖಂಡನ ಜೊತೆಗೆ ಸೆಲ್ಪಿ

Spread the loveಕರ್ನಾಟಕ‌ ರಾಜ್ಯೋತ್ಸವದಲ್ಲಿ ಕರಾಳ ದಿನಾಚರಣೆ ಮಾಡಲು ಎಂಇಎಸ್ ಗೆ ಅನುಮತಿ ಕೊಡುವುದಿಲ್ಲ ಎಂದು ರಾತ್ರೋರಾತ್ರಿ ಈ‌ ಮೊದಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ