Breaking News

ಮದುವೆ ಮಾಡಿಕೊಡಿ ಅಂತ ಪ್ರೇಯಸಿ ಸಂಬಂಧಿಗೆ ಗನ್ ತೋರಿಸಿ ಫೈರಿಂಗ್‌ಗೆ ಯತ್ನ

Spread the love

ಬೆಂಗಳೂರು: ಮದುವೆ ಮಾಡಿಕೊಡಿ ಎಂದು ಪ್ರೇಯಸಿ ಸಂಬಂಧಿಗೆ ಗನ್ ತೋರಿಸಿ ಪ್ರಿಯಕರ ಬೆದರಿಕೆ ಹಾಕಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೈಯದ್ ಆಮೀನ್ ತನ್ನ ಪ್ರೇಯಸಿಯ ಸಂಬಂಧಿಯ ಬಟ್ಟೆ ಅಂಗಡಿಗೆ ನುಗ್ಗಿ ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ.

2 ಕುಟುಂಬದ ಮಧ್ಯೆ ಹುಡುಗಿ ವಿಚಾರಕ್ಕೆ ಜಗಳ ಇತ್ತು. ಹುಡುಗಿ ವಿಚಾರಕ್ಕೆ ಆಕೆಯ ತಂದೆ ಜತೆ ಯುವಕ ಜಗಳ ಮಾಡಿಕೊಂಡಿದ್ದ. ಹುಡುಗಿ ತಂದೆ ಅಂಗಡಿ ಮುಂದೆ ಬಂದು ಜಗಳ ಮಾಡಿ ಪಿಸ್ತೂಲ್ ತೆಗೆದು ಹೆದರಿಸಿದ್ದ. ತಕ್ಷಣ ಸಂಬಂಧಿಕರು ಹುಡುಗನ ಬಳಿ ಪಿಸ್ತೂಲ್ ಕಿತ್ತುಕೊಂಡಿದ್ದರು. ಬಳಿಕ ಯುವಕ & ಯುವಕನ ಸ್ನೇಹಿತ ಪಿಸ್ತೂಲ್ ಜತೆ ಎಸ್ಕೇಪ್ ಆಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಸೈಯದ್ ಆಮೀನ್ ಬಟ್ಟೆ ಅಂಗಡಿ ಮಾಲೀಕನ ಸಂಬAಧಿಯಾಗಿದ್ದ. ಸಂಬAಧಿಯ ಮಗಳನ್ನು ಪ್ರೀತಿಸುತ್ತಿದ್ದ. ಆಕೆ ಕೂಡ ಆರೋಪಿಯನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಹುಡುಗಿಯನ್ನು ಮದುವೆ ಮಾಡಿಕೊಡಿ ಎಂದು ಕಳೆದ ಕೆಲ ದಿನಗಳಿಂದ ದುಂಬಾಲು ಬಿದ್ದಿದ್ದ. ಕಳೆದ ವಾರವಷ್ಟೇ ಎರಡು ಕುಟುಂಬದ ಮಧ್ಯೆ ಮಾತುಕತೆ ಆಗಿತ್ತು. ಇವತ್ತು ಇದ್ದಕ್ಕಿದ್ದಂತೆಯೇ ಗನ್ ಸಮೇತ ಬಟ್ಟೆ ಅಂಗಡಿ ಬಳಿ ಬಂದಿದ್ದ. ರಾತ್ರಿ 8 ಗಂಟೆ ಸುಮಾರಿಗೆ ಬಟ್ಟೆ ಅಂಗಡಿ ಬಳಿ ಸ್ನೇಹಿತನ ಜತೆ ಆರೋಪಿ ಬಂದಿದ್ದ. ಮತ್ತೆ ಮದುವೆ ಮ್ಯಾಟರ್ ತೆಗೆದು ಜಗಳ ಮಾಡಿದ್ದಾನೆ.

ಈ ವೇಳೆ ಗನ್ ತೆಗೆದುಕೊಂಡು ಫೈರ್ ಮಾಡಲು ಮುಂದಾಗಿದ್ದ. ಆಗ ಆರೋಪಿ ಸೈಯದ್ ಆಮೀನ್‌ನನ್ನ ಸ್ನೇಹಿತ ತಡೆದಿದ್ದಾನೆ. ಕೂಡಲೇ ಸ್ಥಳೀಯರಿಂದ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಕರೆ ಮಾಡುತ್ತಿದ್ದಂತೆ ಆರೋಪಿ ಮತ್ತು ಸ್ನೇಹಿತ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಟ್ಟೇನಹಳ್ಳಿ ಪೊಲೀಸರು ತನಿಖೆ ನಡೆಸಿದ್ದಾರೆ.


Spread the love

About Laxminews 24x7

Check Also

ಡಿಸೆಂಬರ್ – ಜನವರಿಗೆ ಮೊದಲ ಹಂತದಲ್ಲಿ 5 ಲಕ್ಷ ಸೈಟು ಹಂಚಿಕೆ: ಡಿಸಿಎಂ ಪರಮೇಶ್ವರ್‌

Spread the loveಬೆಂಗಳೂರು: ರಾಜ್ಯದ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ರೂಪಿಸಿರುವ ಯೋಜನೆಯಡಿ ಡಿಸೆಂಬರ್‌–ಜನವರಿಯಲ್ಲಿ ಮೊದಲ ಹಂತದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ