Breaking News

ಸ್ಕೇಟಿಂಗ್ ಸ್ಪರ್ಧೆಯ ಮೊದಲ ದಿನವೇ ಪದಕಗಳ ಬೇಟೆ: ದಕ್ಷಿಣ ವಲಯದ ಕ್ರೀಡಾಪಟುಗಳ ಭರ್ಜರಿ ಪ್ರದರ್ಶನ

Spread the love

ಬೆಳಗಾವಿಯಲ್ಲಿ ನಡೆಯುತ್ತಿರುವ ಸಿಬಿಎಸ್‌ಇ ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್‌ಶಿಪ್‌-2026ರ ಮೊದಲ ದಿನವೇ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಅದರಲ್ಲೂ ದಕ್ಷಿಣ ವಲಯದ ಸ್ಕೇಟರ್‌ಗಳು ವಿವಿಧ ವಿಭಾಗಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ. ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರತಿಭಾವಂತ ಕ್ರೀಡಾಪಟುಗಳ ನಡುವೆ ತೀವ್ರ ಪೈಪೋಟಿ ನಡೆದಿದ್ದು, ವೇಗ, ಕೌಶಲ ಮತ್ತು ಸಮತೋಲನದ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆದಿದೆ.

ಬೆಳಗಾವಿಯ ಪ್ರತಿಷ್ಠಿತ ಬಿರ್ಲಾ ಇಂಟರ್‌ನ್ಯಾಷನಲ್ ಸ್ಕೂಲ್ ಮತ್ತು ಗ್ಲೋಬಲ್ ಇಂಟರ್‌ನ್ಯಾಷನಲ್ ಸ್ಕೂಲ್‌ಗಳು ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಹಾಗೂ ಶಿವಗಂಗಾ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಈ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್ ಆಯೋಜಿಸಿವೆ.

ಮೊದಲ ದಿನದ ಸ್ಪರ್ಧೆಗಳಲ್ಲಿ ಮೋಕ್ಷಿತ್ ಎನ್.ಬಿ., ಸೆಲಿನಾ ಮ್ಯಾಡಿಸನ್ ಎಸ್., ರಿಹಾನ್ ರಾಜು ಪವನ್, ಯಜಿನಿ ಶ್ರೀ ವೈ., ಅಭಯ್, ಜೆಸ್ನಿಯಾ ಕೊರಿಯಾ, ಅಂಶುಮಾನ್ ಬಾಘೇಲ್, ಅಭಿತ್ ಕುಮಾರ್ ಜಿ., ಅಮೃತ್ ಪಿ., ಟಿ.ಡಿ. ಜಾಸ್ವಿಕ್, ಆಹಾನಾ ಗುಪ್ತಾ, ದರ್ಶುನ್ ಕೀರ್ತಿಕ್, ಪಿ. ಜಯಾ ಹರ್ಷಿಣಿ, ಸೂರಜ್ ಸ್ವೈನ್, ಕೆ. ಓಜಸ್ವಿ, ವಿಶಾಲ್ ದೇವ್ ಗೋಸ್ವಾಮಿ, ಅನುಷ್ಕಾ ತ್ಯಾಗಿ, ಆದಿತ್ಯ ಶಂಕರ್ ಆರ್. ಮತ್ತು ಮಧುಮಿತಾ ವಿ. ಪದಕ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಕಂಚಿನ ಪದಕ ವಿಜೇತರ ಪಟ್ಟಿಯಲ್ಲಿ ಕೆ. ಹನ್ಶಿತ್, ಮೈಶಾ ಡ್ಯಾನಿಶ್, ಅಲಿಟ್ ಜೇಮ್ಸ್, ಕೃತಿ ಎಸ್. ಐತಾಳ್, ಮನ್ಸೆಹಜ್ ಸಿಂಗ್ ಥಿಂಡ್, ಅಭಯಾ ಶರ್ಮಾ, ಕೆ. ಪವನ್ ಸೂರ್ಯ, ಭಗೀರಥ್ ಪ್ರತಾಪ್ ಸಿಂಗ್, ಸಿಯಾ ಮಲಿಕ್, ಎಸ್. ಜೀವೇಶ್, ಸಿ. ಪ್ರತೀಕ್ಷಾ, ಹಾರ್ಥಿಕ್ ಕಣ್ಣಾ ಪಿ., ಬೃಜೋಧ್ ಕೌರ್, ಶ್ರೀಜಿತ್, ಐಶ್ವರ್ಯ ಜೆ., ಆರ್ಯ ಗುಡೂರು, ಆರ್ನಾ ಪ್ರಸಾದ್, ರುದ್ರ ಚೌಧರಿ ಮತ್ತು ಪ್ರೇಕ್ಷಾ ಸೋಲಂಕಿ ಸ್ಥಾನ ಪಡೆದಿದ್ದಾರೆ.

ಇನ್ನು, ಚಾಂಪಿಯನ್‌ಶಿಪ್ ಯಶಸ್ವಿಯಾಗಿ ನಡೆಯಲು ಸ್ಕೇಟಿಂಗ್ ತರಬೇತುದಾರರಾದ ಸೂರ್ಯಕಾಂತ ಹಿಂದಲಗೇಕರ್, ನಿಖಿಲ್ ಚಿಂದಕ್, ವಿಶ್ವನಾಥ ಯೆಲೂರಕರ್, ಯೋಗೇಶ್ ಕುಲಕರ್ಣಿ, ವಿಠ್ಠಲ್ ಗಂಗಣೆ, ಸೋಹಂ ಹಿಂದಲಗೇಕರ್, ಸ್ವರೂಪ್ ಪಾಟೀಲ ಮತ್ತು ಶಾಲ್ಯ ತರ್ಲೇಕರ್ ಶ್ರಮಿಸುತ್ತಿದ್ದಾರೆ.


Spread the love

About Laxminews 24x7

Check Also

ಪ್ರದೀಪ್ ಈಶ್ವರ್ ಕುಟುಂಬಕ್ಕೆ ಮಹಾಲಕ್ಷ್ಮಿಯ ಆಗಮನ – ತಂದೆಯಾದ ಸಂಭ್ರಮದಲ್ಲಿ ಶಾಸಕ

Spread the loveಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ