Breaking News

ಬೆಳಗಾವಿ ಸುವರ್ಣ‌ ಸೌಧದ 11 ಲಕ್ಷ ಕರೆಂಟ್ ಬಿಲ್ ಬಾಕಿ

Spread the love

ಬೆಳಗಾವಿ: ಚಳಿಗಾಲ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್ ಆದ ಬೆನ್ನಲ್ಲೇ ಸುವರ್ಣ ಸೌಧಕ್ಕೆ  ಕರೆಂಟ್ ಶಾಕ್ ಭೀತಿ ಎದುರಾಗಿದೆ. 3 ತಿಂಗಳಿಂದ ಹೆಸ್ಕಾಂಗೆ ಸುವರ್ಣಸೌಧದ 11 ಲಕ್ಷ ಕರೆಂಟ್ ಬಿಲ್ ಪಾವತಿಯಾಗಿಲ್ಲ.

ಕರೆಂಟ್ ಬಿಲ್ ಪಾವತಿಸುವಂತೆ ಹೆಸ್ಕಾಂ ಅಧಿಕಾರಿಗಳು ಮೌಖಿಕ ಸೂಚನೆ ನೀಡಿದ್ದಾರೆ. ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್ ಮಾಡುವುದಾಗಿ ಹೆಸ್ಕಾಂ ಎಚ್ಚರಿಕೆ ನೀಡಿದೆ. ಸುವರ್ಣ ಸೌಧ ನಿರ್ವಹಣೆ ಹೊಣೆ ಇರೋದು ಲೋಕೋಪಯೋಗಿ ಇಲಾಖೆಗೆ. ಸರ್ಕಾರದ ವಿಶೇಷ ಅನುದಾನ ನಿಯಮಿತವಾಗಿ ಸೌಧದ ನಿರ್ವಹಣೆಗೆ ಬಿಡುಗಡೆ ಆಗ್ತಿಲ್ಲ.

ಪ್ರತಿ ವರ್ಷ ಸೌಧದ ನಿರ್ವಹಣೆಗೆ 2.20 ಕೋಟಿ ಲಕ್ಷ ಹಣ ಬೇಕು. ಈ ವರ್ಷ ಪ್ರಸ್ತಾವನೆ ಸಲ್ಲಿಸಿದರೂ ಆರ್ಥಿಕ ಇಲಾಖೆ ಅನುಮೋದನೆ ಸಿಕ್ಕಿಲ್ಲ. ಲೋಕೋಪಯೋಗಿ ಇಲಾಖೆಯಿಂದ 2.20 ಕೋಟಿ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಚಳಿಗಾಲ ಅಧಿವೇಶನಕ್ಕೆ ದಿನಗಣನೇ ಶುರುವಾಗಿದ್ದರೂ ನಿರ್ವಹಣೆ ಅನುದಾನ ಬಿಡುಗಡೆ ಆಗಿಲ್ಲ. ಉತ್ತರದ ಶಕ್ತಿ ಸೌಧದ ಬಗ್ಗೆ ಸರ್ಕಾರದ ನಿರ್ಲಕ್ಷ್ಯಕ್ಕೆ ಬೆಳಗಾವಿ ಜನರ ಆಕ್ರೋಶ ಹೊರಹಾಕಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ SC/ST ಮೀಸಲಾತಿ ಹೆಚ್ಚಿಸಲು ಮಧ್ಯ ಪ್ರವೇಶಿಸುವಂತೆ ಮೋದಿಗೆ ಪರಮೇಶ್ವರ್‌ ಪತ್ರ

Spread the loveಬೆಂಗಳೂರು: ರಾಜ್ಯದಲ್ಲಿ SC/ST ಮೀಸಲಾತಿಹೆಚ್ಚಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಡಿಸಿಎಂ ಪರಮೇಶ್ವರ್‌  ಅವರು ಕೇಂದ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ