ಬೆಲೂರು ನಿವಾಸಿ 33 ವರ್ಷದ ಶಿವಕುಮಾರ್ ಕೊಪಟೆ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಬೆಳಗಿನ ಜಾವ ಬೈಕ್ ಸವಾರ ಬಸವ ಕಲ್ಯಾಣದಿಂದ ಹುಮ್ನಾಬಾದ್ ಕಡೆ ಹೊರಟಿದ್ದರು. ಇದೇ ವೇಳೆ ರಾಂಗ್ ರೂಟ್ನಲ್ಲಿ ಬಂದ ಕಾರು ರಭಸವಾಗಿ ಬೈಕ್ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಯುವಕನ ನಿವಾಸದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿಯೂ ಸೂತಕದ ಛಾಯೆ ಮನೆ ಮಾಡಿದೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆಯಾಗಿದೆ.
Laxmi News 24×7